Top

ವಿಮಾನದಲ್ಲೇ ಕಂದಮ್ಮನಿಗೆ ಹಾಲುಣಿಸಿ ಮಾನವೀಯತೆ ಮೆರೆದ ಗಗನಸಖಿ

ವಿಮಾನದಲ್ಲೇ ಕಂದಮ್ಮನಿಗೆ ಹಾಲುಣಿಸಿ ಮಾನವೀಯತೆ ಮೆರೆದ ಗಗನಸಖಿ
X

ಗಗನ ಸಖಿಯೊಬ್ಬಳು ವಿಮಾನದಲ್ಲಿ ಅಳುತ್ತಿದ್ದ ಮಗುವಿಗೆ ಹಾಲುಣಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಫಿಲಿಪೈನ್ಸ್‌ನ ವಿಮಾನವೊಂದರಲ್ಲಿ ಗಗನಸಖಿಯಾಗಿರುವ ಪತ್ರೀಷಾ ಆರ್ಗ್ಯಾನೋ ಎಂಬಾಕೆ ಬೆಳಿಗ್ಗೆ ಸಮಯದಲ್ಲಿ ವಿಮಾನದಲ್ಲಿ ಸಂಚರಿಸುತ್ತಿದ್ದಾಗ, 9 ತಿಂಗಳ ಮಗುವೊಂದು ಅಳುತ್ತಿದ್ದದ್ದು ಕಂಡುಬಂದಿದೆ.

ಆಗ ಪ್ರತೀಷಾ ಮಗುವಿನ ಅಮ್ಮನ ಬಳಿ ಮಗುವಿಗೆ ಹಾಲುಣಿಸುವಂತೆ ಹೇಳಿದ್ದಾರೆ. ಆದರೆ ಹಾಲುಣಿಸಲಾಗದೇ ಕಣ್ಣೀರಾದ ಮಗುವಿನ ತಾಯಿ ಹಾಲುಣಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಈ ಕಾರಣಕ್ಕಾಗಿ ಪ್ರತೀಷಾ ಮಗುವಿಗೆ ತಾನೇ ಹಾಲುಣಿಸಿದ್ದಾಳೆ.

ಈ ಬಗ್ಗೆ ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪ್ರತೀಷಾ, ಮಗುವಿನ ತಾಯಿಯ ಬಳಿಯಾಗಲಿ, ವಿಮಾನದಲ್ಲಾಗಲಿ ಮಗುವಿಗೆ ಹಾಲು ನೀಡಲು ಆಗುತ್ತಿರಲಿಲ್ಲ. ಆದ್ದರಿಂದ ಮಗುವಿಗೆ ತಾನು ಹಾಲುಣಿಸಿದ್ದು, ಮಗುವಿನ ತಾಯಿ ಧನ್ಯವಾದ ತಿಳಿಸಿದ್ದಾರೆ ಎಂದಿದ್ದಾರೆ.

ಇನ್ನು ಪ್ರತೀಷಾ ಹಾಕಿರುವ ಈ ಪೋಸ್ಟ್‌ಗೆ ಭಾರೀ ಮೆಚ್ಚುಗೆ ಬಂದಿದ್ದು, 36ಸಾವಿರ ಜನ ಶೇರ್ ಮಾಡಿದ್ದು, 8ಸಾವಿರ ಜನ ಕಮೆಂಟ್ ಮಾಡಿದ್ದಾರೆ. ಅಲ್ಲದೇ ಪ್ರತೀಷಾ ಮಾನವೀಯತೆ ಮೆರೆದಿದ್ದಾರೆಂದು ಮೆಚ್ಚುಗೆ ಸಲ್ಲಿಸಿದ್ದಾರೆ.

Next Story

RELATED STORIES