ಬಾಳೆಹಣ್ಣು ತೂಕ ಹೆಚ್ಚಿಸುತ್ತೋ? ಇಳಿಸುತ್ತೋ?- ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಎಲ್ಲಾ ಸೀಸನ್‌ನಲ್ಲೂ ಎಲ್ಲಾ ಕಡೆಗೂ ಸಿಗುವಂಥ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಊಟ ಮಾಡದಿದ್ರೂ ಬಾಳೆಹಣ್ಣು ತಿಂದ್ರೆ ಸಾಕು ಹೊಟ್ಟೆ ತುಂಬಿ ಬಿಡತ್ತೆ. ಇನ್ನು ಈ ಹಣ್ಣು ಹಬ್ಬ-ಹರಿದಿನ, ಪೂಜೆ, ಮದುವೆ, ಹೀಗೆ ಹಲವು ಶುಭಕಾರ್ಯಕ್ಕೆ ಬೇಕೇ ಬೇಕು.

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಬಾಳೆಹಣ್ಣಿನ ಬಗ್ಗೆ ಹಲವು ಗೊಂದಲಗಳಿದೆ. ಕೆಲವರ ಪ್ರಕಾರ ಬಾಳೆಹಣ್ಣನ್ನ ತಿಂದರೆ ದಪ್ಪಗಾಗ್ತಾರೆ. ಇನ್ನು ಕೆಲವರು ಹೇಳುವ ಪ್ರಕಾರ ಬಾಳೆಹಣ್ಣು ತಿನ್ನುವುದರಿಂದ ತೂಕ ಇಳಿಯುತ್ತದೆ . ಈ ಎಲ್ಲ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.

ತೂಕ ಇಳಿಯುವುದು ಮತ್ತು ತೂಕ ಹೆಚ್ಚಿಸಿಕೊಳ್ಳುವುದು, ನಾವು ಯಾವ ರೀತಿ ಬಾಳೆಹಣ್ಣು ತಿನ್ನುತ್ತೇವೆಂಬುದ ಮೇಲೆ ಅವಲಂಬಿತವಾಗಿದೆ.

ಬಾಳೆಹಣ್ಣಿನಲ್ಲಿ ಕ್ಯಾಲೋರೀಸ್ ಇರುತ್ತದೆಂಬ ಕಾರಣಕ್ಕೆ ಕೆಲವರು ಇದನ್ನ ತಿನ್ನಲು ಹಿಂಜರಿಯುತ್ತಾರೆ. ಆದರೆ ಇದರ ಜೊತೆಗೆ ಬಾಳೆಹಣ್ಣಿನಲ್ಲಿ ಮ್ಯಾಗ್ನಿಷಿಯಮ್, ವಿಟಾಮಿನ್ ಬಿ6, ವಿಟಾಮಿನ್ ಸಿ, ಪೊಟ್ಯಾಷಿಯಮ್ ಇದೆ.
ಬೇರೆ ಯಾವುದಾದರೂ ಹಣ್ಣು ತಿಂದಾಗ, ಬೇಗ ಹೊಟ್ಟೆ ಹಸಿವಾಗುತ್ತದೆ. ಅಲ್ಲದೇ ಬೇಗ ಶಕ್ತಿಕುಂದುತ್ತದೆ. ಆದರೆ ಬಾಳೆಹಣ್ಣನ್ನು ತಿಂದು ತುಂಬ ಹೊತ್ತಿನ ತನಕ ಕ್ರಿಯಾಶೀಲವಾಗಿರಬಹುದು. ಅಲ್ಲದೇ ಹಸಿವು ತಡೆದು, ಶಕ್ತಿ ತುಂಬುವುದರಲ್ಲೂ ಇದು ಸಹಕಾರಿಯಾಗಿದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ತೂಕ ಇಳಿಸಿಕೊಳ್ಳುವುದಕ್ಕೆ ಇದು ಸಹಾಯವಾಗುತ್ತದೆ. ತಿಂಡಿ ತಿಂದ ನಂತರ, ಊಟ ಮಾಡುವುದಕ್ಕೂ ಮುಂಚೆ ಬಾಳೆ ಹಣ್ಣನ್ನ ತಿನ್ನುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು. ಆದರೆ ತೂಕ ಹೆಚ್ಚಿಸಿಕೊಳ್ಳಬೇಕೆಂದಲ್ಲಿ, ತಿಂಡಿಯ ನಂತರ ಊಟಕ್ಕೂ ಮುನ್ನ ಎರಡು ಬಾಳೆಹಣ್ಣು ತಿನ್ನಬೇಕು.

ಆದರೆ ಸೂರ್ಯಾಸ್ತದ ನಂತರ ಬಾಳೆಹಣ್ಣು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

Recommended For You

Leave a Reply

Your email address will not be published. Required fields are marked *