Top

ನಾನು ಹೇಳಿದ್ದು ಸತ್ಯ.. ಬೇಸರವಾಗಿದ್ದರೆ ಕ್ಷಮೆ ಇರಲಿ: ನಟಿ ಸಂಜನಾ

ನಾನು ಹೇಳಿದ್ದು ಸತ್ಯ.. ಬೇಸರವಾಗಿದ್ದರೆ ಕ್ಷಮೆ ಇರಲಿ: ನಟಿ ಸಂಜನಾ
X

ಮೀಟೂ ಅಭಿಯಾನದಲ್ಲಿ ಗಂಡ-ಹೆಂಡತಿ ಚಿತ್ರೀಕರಣದ ವೇಳೆ ನಡೆದ ಘಟನೆ ಹಾಗೂ ನನಗಾದ ಅನುಭವದ ಕುರಿತು ಹಂಚಿಕೊಂಡಿದ್ದು ಎಲ್ಲವೂ ನಿಜ. ಆದರೆ ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ನಟಿ ಸಂಜನಾ ಹೇಳಿದ್ದಾರೆ.

ನಿರ್ದೇಶಕ ಶ್ರೀವತ್ಸ ಹಾಗೂ ಗಂಡ-ಹೆಂಡತಿ ಚಿತ್ರ ತಂಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಿರಿಯ ನಟ ಅಂಬರೀಶ್ ಹಾಗೂ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ನೇತೃತ್ವದಲ್ಲಿ ನಡೆದ ಕಲಾವಿದರು ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಕ್ಷಮೆ ಕೋರಲು ನಟಿ ಸಂಜನಾಗೆ ಗಡುವು ನೀಡಲಾಗಿತ್ತು.

ಸಾಹಿತಿ ನಾಗೇಂದ್ರ ಪ್ರಸಾದ್ ಅವರೊಂದಿಗೆ ಸಂಜನಾ ಕ್ಷಮೆಯಾಚಿಸುತ್ತಿರುವ ವೀಡಿಯೊ ಬಿಡುಗಡೆ ಮಾಡಲಾಗಿದ್ದು, ಸಂಜನಾ ಬಹಿರಂಗ ಕ್ಷಮೆಯಾಚಿಸಿದ್ದಾರೆ.

ಗಂಡ-ಹೆಂಡತಿ ಚಿತ್ರದ ವೇಳೆ ನನಗೆ ಇನ್ನೂ ಚಿಕ್ಕ ವಯಸ್ಸು. ಆಗ ನನಗೆ ಆದ ನೋವು ನಡೆದ ಘಟನೆ ಎಲ್ಲವೂ ಸತ್ಯ. ಈ ನನ್ನ ಮಾತಿನಿಂದ ನಿರ್ದೇಶಕ ಹಾಗೂ ಚಿತ್ರ ತಂಡದವರಿಗೆ ಆಗಿರುವ ನೋವಿಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

Next Story

RELATED STORIES