Top

ಅಯೋಧ್ಯೆ ವಿವಾದ ತುರ್ತು ವಿಚಾರಣೆ ಇಲ್ಲ: ಸುಪ್ರೀಂ ಮರು ಸ್ಪಷ್ಟನೆ

ಅಯೋಧ್ಯೆಯ ಭೂವಿವಾದ ಕುರಿತು ತುರ್ತು ವಿಚಾರಣೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್​, ಈ ಹಿಂದೆ ನಿರ್ಧರಿಸಿದಂತೆ ಜನವರಿ ಮೊದಲ ವಾರದಲ್ಲೇ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಅಖಿಲ ಭಾರತ ವಿಶ್ವ ಮಹಾಸಭಾ ಸಲ್ಲಿಸಿದ್ದ ತುರ್ತು ವಿಚಾರಣೆ ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ಈಗಾಗಲೇ ಅರ್ಜಿ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

100 ವರ್ಷಗಳ ಹಿಂದಿನ ವಿವಾದ ಕುರಿತ ವಿವಾದವನ್ನು ಶೀಘ್ರ ಬಗೆಹರಿಸುವಂತೆ ಉತ್ತರ ಪ್ರದೇಶ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​, 4 ನಿಮಿಷಗಳ ಆದೇಶದಲ್ಲಿ ಪ್ರಕರಣ ಇತ್ಯರ್ಥಕ್ಕೆ ತಮ್ಮದೇ ಆದ ಆದ್ಯತೆಗಳಿವೆ. ಅವುಗಳ ಆಧಾರದ ಮೇಲೆ ಅರ್ಜಿಗಳ ವಿಚಾರಣೆ ನಡೆಯಲಿದ್ದು, ಜನವರಿಯಲ್ಲಿ ಅಯೋಧ್ಯೆ ವಿವಾದ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತ್ತು.

Next Story

RELATED STORIES