Top

ಧವನ್, ಪಂತ್ ಆಟಕ್ಕೆ ಪತರಗುಟ್ಟಿದ ವಿಂಡೀಸ್​: ಭಾರತ ಕ್ಲೀನ್​ಸ್ವೀಪ್ ಸಾಧನೆ

ಧವನ್, ಪಂತ್ ಆಟಕ್ಕೆ ಪತರಗುಟ್ಟಿದ ವಿಂಡೀಸ್​: ಭಾರತ ಕ್ಲೀನ್​ಸ್ವೀಪ್ ಸಾಧನೆ
X

ಶತಕ ವಂಚಿತ ಶಿಖರ್ ಧವನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 6 ವಿಕೆಟ್​ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿ ಮೂರು ಪಂದ್ಯಗಳ ಟಿ-20 ಸರಣಿಯನ್ನು 3-0ಯಿಂದ ಕ್ಲೀನ್​ಸ್ವೀಪ್ ಸಾಧನೆ ಮಾಡಿತು.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 3 ವಿಕೆಟ್​ಗೆ 181 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ ಅಂತಿಮ ಎಸೆತದಲ್ಲಿ 4 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ದಾಖಲಿಸಿತು.

ಭಾರತ ತಂಡ ಆರಂಭದಲ್ಲೇ ರೋಹಿತ್​ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಈ ಹಂತದಲ್ಲಿ ನೆಲಕಚ್ಚಿ ಆಡಿದ ಧವನ್ ಮತ್ತು ರಿಷಭ್ ಪಂತ್ ಮೂರನೇ ವಿಕೆಟ್​ಗೆ 130 ರನ್​ಗಳ ಬೃಹತ್ ಜೊತೆಯಾಟ ನಿಭಾಯಿಸಿದರು.

ಧವನ್ 62 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ 92 ರನ್ ಬಾರಿಸಿದ್ದಾಗ ಅಲನ್ ಎಸೆತದಲ್ಲಿ ಮುಗ್ಗರಿಸಿ 8 ರನ್​ಗಳಿಂದ ಶತಕ ವಂಚಿತರಾದರು. ಮತ್ತೊಂದೆಡೆ ರಿಷಭ್ ಪಂತ್ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 58 ರನ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಪರ ಪೂರನ್ 25 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸೇರಿದ 53 ರನ್ ಸಿಡಿಸಿದರು. ಡಾರೆನ್ ಬ್ರಾವೊ 37 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 43 ರನ್ ಗಳಿಸಿದರು.

  • ಸಂಕ್ಷಿಪ್ತ ಸ್ಕೋರ್
  • ವೆಸ್ಟ್ ಇಂಡೀಸ್ 20 ಓವರ್ 3 ವಿಕೆಟ್ 181 (ಪೂರನ್ ಅಜೇಯ 53, ಬ್ರಾವೊ ಅಜೇಯ 43, ಹೆಟ್ಮೆಯರ್ 26, ಹೋಪ್ 24, ಚಾಹಲ್ 28/2).
  • ಭಾರತ 20 ಓವರ್ 4 ವಿಕೆಟ್ 182 (ಧವನ್ 92, ಪಂತ್ 58, ರಾಹುಲ್ 17, ಪಾಲ್ 32/2).
  • ಪಂದ್ಯಶ್ರೇಷ್ಠ: ಶಿಖರ್ ಧವನ್
  • ಸರಣಿಶ್ರೇಷ್ಠ: ಕುಲದೀಪ್ ಯಾದವ್

Next Story

RELATED STORIES