Top

ಟಿ-20 ವಿಶ್ವಕಪ್​: ಮಿಥಾಲಿ ಆಟಕ್ಕೆ ಮೆತ್ತಗಾದ ಪಾಕಿಸ್ತಾನ

ಟಿ-20 ವಿಶ್ವಕಪ್​: ಮಿಥಾಲಿ ಆಟಕ್ಕೆ ಮೆತ್ತಗಾದ ಪಾಕಿಸ್ತಾನ
X

ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಸೊಗಸಾದ ಅರ್ಧಶತಕದ ನೆರವಿನಿಂದ ಭಾರತ ತಂಡ 7 ವಿಕೆಟ್​ಗಳಿಂದ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ವನಿತೆಯರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಗಾಯಾನದ ಪ್ರಾವಿನೆನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನದ ಬಿಸ್ಮಾ ಮಹರೂಫ್ ಮತ್ತು ನಿದಾ ದರ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್​ಗೆ 133 ರನ್ ಕಲೆ ಹಾಕಿತು.

ಸಾಧಾರಣ ಗುರಿ ಬೆಂಬತ್ತಿದ ಭಾರತ ತಂಡ ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಮಿಥಾಲಿ ರಾಜ್ 47 ಎಸೆತಗಳಲ್ಲಿ 7 ಬೌಂಡರಿ ಸೇರಿದ 56 ರನ್ ಬಾರಿಸಿ ಔಟಾಗುವ ಮುನ್ನ ಮೊದಲ ವಿಕೆಟ್​ಗೆ ಸ್ಮೃತಿ ಮಂದಣ್ಣ (26) ಜೊತೆ 73 ರನ್ ಜೊತೆಯಾಟ ನಿಭಾಯಿಸಿದರು. ಹರ್ಮಿಂದರ್ ಕೌರ್ (ಅಜೇಯ 14) ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ 30 ರನ್​ಗೆ 3 ವಿಕೆಟ್ ಕಳೆದುಕೊಂಡು ತತ್ತರಿಸಿತ್ತು. ಆದರೆ ಬಿಸ್ಮಾ ಮಹರೂಫ್ (53) ಮತ್ತು ನಿದಾ ದರ್ (52) 4ನೇ ವಿಕೆಟ್​ಗೆ 97 ರನ್ ಜೊತೆಯಾಟ ನಿಭಾಯಿಸಿ ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು.

  • ಸಂಕ್ಷಿಪ್ತ ಸ್ಕೋರ್
  • ಪಾಕಿಸ್ತಾನ 20 ಓವರ್ 7 ವಿಕೆಟ್ 133 (ಬಿಸ್ಮಾ 53, ನಿದಾ 52, ಜವೇರಿಯಾ 16, ಪೂನಮ್ 22/2, ಹೇಮಲತಾ 34/2).
  • ಭಾರತ 19 ಓವರ್ 3 ವಿಕೆಟ್ 137 (ಮಿಥಾಲಿ 56, ಸ್ಮೃತಿ ಮಂದಣ್ಣ 26, ರೋಡ್ರಿಗಜ್ 16, ಹರ್ಮನ್​ಪ್ರೀತ್ ಕೌರ್ ಅಜೇಯ 14).

Next Story

RELATED STORIES