ಸಚಿವ ಅನಂತ ಕುಮಾರ್ ನಡೆದು ಬಂದ ದಾರಿ, ಸಾಧನೆ

1..ಅನಂತ್ ಕುಮಾರ್ ವಿದ್ಯಾರ್ಥಿ ಆಗಿದ್ದಾಗ, ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಪ್ರತಿಭಟನೆಗಿಳಿದು ಸೆರೆವಾಸ ಅನುಭವಿಸಿದ್ದರು.
2..1985: ಅನಂತ ಕುಮಾರ್ ಆರ್ಎಸ್ಎಸ್ ಸಕ್ರೀಯ ಕಾರ್ಯಕರ್ತರಾಗಿದ್ದು, 1985ರಲ್ಲಿ ಎಬಿವಿಪಿ(ಅಖಿಲ ಭಾರತ ವಿದ್ಯಾರ್ಥಿ ಪರಿಷತ್)ನ ನ್ಯಾಷನಲ್ ಸೆಕ್ರೆಟರಿಯಾಗಿದ್ದರು.
3..ಬಳಿಕ ಬಿಜೆಪಿ ಸೇರ್ಪಡೆಗೊಂಡು, ಬಿಜೆಪಿಯ ಯುವ ಮೋರ್ಚಾ ಪ್ರೆಸಿಡೆಂಟ್ ಆದರು.
4..1996: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ.
5..1998: ವೆಬ್ಸೈಟ್ ಹೊಂದಿದ್ದ ಭಾರತದ ಮೊದಲ ರಾಜಕಾರಣಿ ಅನಂತ ಕುಮಾರ್ .
ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ, ಕೇಂದ್ರ ವಿಮಾನಯಾನ ಸಚಿವರಾಗಿದ್ದರು.
6..1999: ಕೇಂದ್ರದಲ್ಲಿ ಎನ್ಡಿಎ ಸರ್ಕಾರವಿದ್ದಾಗ, ಪ್ರವಾಸೋದ್ಯಮ, ಕ್ರೀಡಾ, ಯೂತ್, ಕಲ್ಚರ್, ನರಗಾಭಿವೃದ್ಧಿ ಸಚಿವರಾಗಿದ್ದರು.
7..2003: 2003ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಭಾಜನರಾದರು
8..ಮಧ್ಯಪ್ರದೇಶ, ಬಿಹಾರ, ಛತ್ತೀಸ್ಗಢ ಸೇರಿದಂತೆ ಹಲವು ರಾಜ್ಯಗಳ ಉಸ್ತುವಾರಿ ವಹಿಸಿದ್ದರು.
9..2014ರಲ್ಲಿ ಮೋದಿ ಸರ್ಕಾರ ಬಂದಾಗ ಅನಂತ ಕುಮಾರ್ ರಸಗೊಬ್ಬರ ಸಚಿವರಾದರು.
22 ವರ್ಷಗಳಿಂದ ಬೆಂಗಳೂರು ಸೌತ್ ಪ್ರತಿನಿಧಿಯಾಗಿದ್ದರು.
10..ಯೂರಿಯಾ, ನೀಮ್ ಕೋಟೆಡ್ ಯೂರಿಯಾ ಕ್ರಾಂತಿ ಶುರು ಮಾಡಿದ್ದು ಅನಂತ ಕುಮಾರ್. ಈ ಮೂಲಕ ವಾರ್ಷಿಕ 10ಸಾವಿರ ಕೋಟಿ ಉಳಿತಾಯವಾಗುಂತೆ ಮಾಡಿದರು.
11..ಕಾರ್ಡಿಯಾಕ್ ಸ್ಟಂಟ್ ಚಿಕಿತ್ಸೆಗೆ 1.5ಲಕ್ಷವಿತ್ತು. ನಂತರ ಅನಂತ ಕುಮಾರ್ ನೇತೃತ್ವದಲ್ಲಿ 27,890 ರೂ. ಅಂದರೆ ಚಿಕಿತ್ಸೆ ಶೇ.85ರಷ್ಟು ಕಡಿಮೆಯಾಯಿತು.
12..ಅಲ್ಲದೇ ಮಂಡಿ ಶಸ್ತ್ರ ಚಿಕಿತ್ಸೆ ಶೇ.69 ಅಂದರೆ, 1 ಲಕ್ಷದಿಂದ 2.5 ಲಕ್ಷದವರೆಗೆ ಇತ್ತು. ನಂತರ 54,500 ರೂ. ಆಯ್ತು.
13..ಅನಂತ ಕುಮಾರ್ ಜನ ಔಷಧಿ ಕೇಂದ್ರ ಸ್ಥಾಪನೆಗೆ ರೂವಾರಿಯಾದರು.
14..ಸ್ಯಾನಿಟರಿ ಪ್ಯಾಡ್ ಕಡಿಮೆ ದರದಲ್ಲಿ ಅಂದರೆ 2.5ರೂ.ಗೆ ದೊರಕುವಂತಾಯ್ತು.
15..ಜಿಎಸ್ಟಿ ಬಿಲ್ ಪಾಸ್ ಮಾಡಿಸಿದ ಕೀರ್ತಿ, ರಾಜ್ಯ ಸಭೆಯಲ್ಲಿ ಮೆಜಾರಿಟಿ ಇಲ್ಲದೆಯೂ ಗೆಲ್ಲಿಸಿದ್ದು ಅನಂತ್ ಸಾಧನೆಯಾಗಿದೆ.