ಶೀತ, ಕೆಮ್ಮಿಗೆ ರಾಮಬಾಣ ಈ ಕಷಾಯ

ಚಲಿಗಾಲ ಶುರುವಾಯ್ತು ಅಂದ್ರೆ ಶೀತ, ಕೆಮ್ಮು ಇತ್ಯಾದಿ ಸಮಸ್ಯೆಗಳು ಬರುವುದು ಸಾಮಾನ್ಯ. ಚಿಕ್ಕ-ಪುಟ್ಟ ಸಮಸ್ಯೆಗಳಿಗೂ ವೈದ್ಯರ ಬಳಿ ಹೋಗುವ ಮೊದಲು ಈ ರೀತಿಯ ಆರೋಗ್ಯಕರ ಪೇಯ ತಯಾರಿಸಿ ಕುಡಿದರೆ, ಶೀತ, ಕೆಮ್ಮಿನಿಂದ ದೂರವಿರಬಹುದು. ಈ ರೀತಿಯ ಕಷಾಯದ ಪುಡಿಯನ್ನ ಅಂಗಡಿಯಿಂದ ತರುವುದಕ್ಕಿಂತ, ಮನೆಯಲ್ಲೇ ಮಾಡುವುದು ಉತ್ತಮ.

ಕಷಾಯದ ಪುಡಿಗೆ ಬೇಕಾಗುವ ಸಾಮಗ್ರಿ: ಕೊತ್ತಂಬರಿ ಕಾಳು 1ಕಪ್, ಜೀರಿಗೆ ಅರ್ಧ ಕಪ್, 2 ಸ್ಪೂನ್ ಸೋಂಪು, 1 ಸ್ಪೂನ್ ಕಾಳುಮೆಣಸು, ಒಂದು ಏಲಕ್ಕಿ.

ಕಷಾಯ ತಯಾರಿಸುವ ವಿಧಾನ: ಮೇಲೀನ ಎಲ್ಲಾ ಸಾಮಗ್ರಿಯನ್ನು ಒಂದು ಬಾಣಲೆಗೆ ಹಾಕಿ, ಹೊಂಬಣ್ಣ ಬರುವತನಕ ಹುರಿಯಿರಿ. ನಂತರ ಇದನ್ನು ಮಿಕ್ಸಿಗೆ ಹಾಕಿ, ತರಿ ತರಿಯಾಗಿ ರುಬ್ಬಿಕೊಳ್ಳಿ. ಈ ಕಷಾಯದ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.

ಪ್ರತಿದಿನ ಕಾಯಿಸಿದ ಹಾಲಿಗೆ ಇದನ್ನು ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಸಿಹಿ ಇಷ್ಟವಿದ್ದಲ್ಲಿ ಇದಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು(ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು). ಶೀತವಾದ ಸಂದರ್ಭದಲ್ಲಿ ಕಷಾಯಕ್ಕೆ ಶುಂಠಿ ಹಾಕಿ ಕುದಿಸಿ ಕುಡಿಯಬಹುದು.

Recommended For You

1 Comment

Leave a Reply

Your email address will not be published. Required fields are marked *