ರಫೆಲ್ ಡೀಲ್: ಸುಪ್ರೀಂಗೆ ಖರೀದಿ ವಿವರ ಸಲ್ಲಿಸಿದ ಕೇಂದ್ರ

X
TV5 Kannada12 Nov 2018 9:24 AM GMT
ವಿವಾದಾತ್ಮಕ ರಫೆಲ್ ಯುದ್ಧ ವಿಮಾನಗಳ ವೆಚ್ಚದ ವಿವರವನ್ನು ಸುಪ್ರೀಂಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರಕಾರ ಸಲ್ಲಿಸಿದೆ.
ರಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರಕಾರ ಮುಚ್ಚಿದ ಲಕೋಟೆಯಲ್ಲಿ ಸೋಮವಾರ ಸುಪ್ರೀಂಕೋರ್ಟ್ಗೆ ವಿವರ ಸಲ್ಲಿಸಿತು.
36 ಯುದ್ಧ ವಿಮಾನ ಖರೀದಿಯ ವೆಚ್ಚ ಹಾಗೂ ಅದರ ಪ್ರಕ್ರಿಯೆ ಕುರಿತು ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ, ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಕೇಂದ್ರ ಸರಕಾರ ಸಲ್ಲಿಸಿದ ವಿಮಾನ ಖರೀದಿ ವಿವರಗಳನ್ನು ಕಕ್ಷಿದಾರರಿಗೆ ನೀಡಿರುವ ಸುಪ್ರೀಂಕೋರ್ಟ್, ವಿವರವನ್ನು ಸಾರ್ವಜನಿಕಗೆ ಬಿಡುಗಡೆ ಮಾಡದಂತೆ ಸೂಚನೆ ನೀಡಿತು.
Next Story