ಕಿತ್ತಳೆ ಹಣ್ಣಿನ ಸೇವನೆಯಿಂದಾಗುವ ಲಾಭಗಳೇನು ಗೊತ್ತಾ..?

ಕಿತ್ತಳೆಯಲ್ಲಿ ಪೊಟ್ಯಾಷಿಯಂ, ಮ್ಯಾಗ್ನಿಶಿಯಂ, ಫೈಬರ್, ವಿಟಮಿನ್ ಸಿ, ಇರುವುದರಿಂದ ಇದರ ಸೇವನೆ ಬರೀ ಆರೋಗ್ಯಕ್ಕಷ್ಟೇ ಅಲ್ಲದೇ, ಸೌಂದರ್ಯ ಅಭಿವೃದ್ಧಿಗೂ ಉತ್ತಮ ಆಹಾರವಾಗಿದೆ.

1..ಕಿತ್ತಳೆಹಣ್ಣನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುವುದು.

2..ಇದರಲ್ಲಿ ಮ್ಯಾಗ್ನಿಷಿಯಮ್ ಇರುವುದರಿಂದ ರಕ್ತಸಂಚಲನವಾಗುವುದಕ್ಕೂ ಇದು ಸಹಕಾರಿಯಾಗಿದೆ. ಅಲ್ಲದೇ ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಬಹುದು.

3..ಮೂಳೆ ಸಂಬಂಧಿ ತೊಂದರೆ, ಮಂಡಿನೋವು ಇತ್ಯಾದಿ ಇದ್ದಲ್ಲಿ, ಕಿತ್ತಳೆ ಹಣ್ಣು ಸೇವಿಸುವುದು ಉತ್ತಮ

4..ಒಣಕೆಮ್ಮು, ಅಸ್ತಮಾ ರೋಗಿಗಳು ಕಿತ್ತಳೆ ಹಣ್ಣು ಸೇವಿಸಬಹುದು.ಅಲ್ಲದೇ ಇದರ ಸೇವನೆಯಿಂದ ಅಸ್ತಮಾ ರೋಗ ಬರುವುದನ್ನೂ ತಡೆಯಬಹುದು.

5..ಕಿತ್ತಳೆ ಹಣ್ಣಿನ ಸೇವನೆಯಿಂದ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಬಹುದು.

6..ಕಣ್ಣಿನ ಆರೋಗ್ಯಕ್ಕೂ ಕಿತ್ತಳೆ ಹಣ್ಣು ಒಳ್ಳೆಯದು.

7..ಕಿತ್ತಳೆ ಹಣ್ಣಿನ ರಸ ಸೇವನೆ ಮತ್ತು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ, ಪುಡಿ ಮಾಡಿ ಅದರಿಂದ ಹಲ್ಲುಜ್ಜುವುದರಿಂದ ಹಲ್ಲಿನ ಹೊಳಪು ಹೆಚ್ಚಾಗುವುದು.

8..ಕಿತ್ತಳೆ ಹಣ್ಣನ್ನ ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.

9..ಕಿತ್ತಳೆ ಹಣ್ಣಿನಿಂದ ವಿವಿಧ ಖಾದ್ಯಗಳನ್ನೂ ಮಾಡಬಹುದು. ಕಿತ್ತಳೆ ಹಣ್ಣಿನಿಂದ ಜ್ಯೂಸ್, ಕೇಕ್, ಬಿಸ್ಕೇಟ್ಸ್, ಐಸ್‌ಕ್ರೀಮ್ ಇನ್ನೂ ಹಲವು ರುಚಿಕರ ಪದಾರ್ಥಗಳನ್ನು ಮಾಡಬಹುದು.

10..ಕಿತ್ತಳೆ ಹಣ್ಣಿನ ಜೊತೆಗೆ, ಇದರ ಸಿಪ್ಪೆಯೂ ಕೂಡ ಆರೋಗ್ಯಕರವಾಗಿದೆ. ಹಸಿ ಸಿಪ್ಪೆಯಿಂದ ಚಟ್ನಿ ಮಾಡಿ ಸೇವಿಸುವುದರಿಂದ ಹಲವು ಉಪಯೋಗಗಳಿದೆ. ಅಲ್ಲದೇ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ, ಪುಡಿ ಮಾಡಿ, ಅದಕ್ಕೆ ಜೇನುತುಪ್ಪ ಸೇರಿಸಿ ಫೇಸ್‌ಪ್ಯಾಕ್ ಹಾಕಬಹುದು.

ಕಿತ್ತಳೆಹಣ್ಣು ಅಥವಾ ಕಿತ್ತಳೆ ಹಣ್ಣಿನ ರಸದ ಉಪಯೋಗದಿಂದ ಉತ್ತಮ ಫಲಿತಾಂಶ ಪಡೆಯಬಹುದು. ಆದರೆ ಅತೀಯಾಗಿ ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಹಾನಿಕರವಾಗಬಹುದು.

Recommended For You

Leave a Reply

Your email address will not be published. Required fields are marked *