Top

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಕಿಂಗ್ ಸ್ಟಾರ್

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಕಿಂಗ್ ಸ್ಟಾರ್
X

ಹಲವು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಕೆಜಿಎಫ್ ಸಿನಿಮಾದ ಟ್ರೇಲರ್ ಮೊನ್ನೆ ಲಾಂಚ್ ಆಗಿದೆ. ಬರೀ ಒಂದು ಗಂಟೆಯಲ್ಲೇ ಲಕ್ಷಕ್ಕೂ ಹೆಚ್ಚು ಜನ ಟ್ರೇಲರ್ ವೀಕ್ಷಿಸಿದ್ದಾರೆ. ಇನ್ನು ಕನ್ನಡ ಸೇರಿ 5 ಭಾಷೆಯಲ್ಲಿ ಕೆಜಿಎಫ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಈ ಮೂಲಕ ಯಶ್‌ಗೆ ನ್ಯಾಷನಲ್ ಸ್ಟಾರ್ ಅನ್ನೋ ಪಟ್ಟ ದೊರೆತಿದೆ.

ಅಲ್ಲದೇ ಬೇರೆ ಭಾಷೆಯ ನಟರು ಕೂಡ ಕೆಜಿಎಫ್‌ನಲ್ಲಿ ಯಶ್ ನಟನೆಗೆ ಫಿದಾ ಆಗಿದ್ದು, ಚಿತ್ರಕ್ಕೆ ಶುಭಕೋರಿದ್ದಾರೆ.

ಇನ್ನು ಕೆಜಿಎಫ್ ಟ್ರೈಲರ್ ಸೂಪರ್ ಹಿಟ್ ಆದ ಹಿನ್ನೆಲೆ ನಟ ಯಶ್ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಳ ಜೊತೆ ಚಿತ್ರರಂಗದ ಮಂದಿಗೂ ಧನ್ಯವಾದ ತಿಳಿಸಿರೋ ಯಶ್, ಟ್ರೈಲರ್ ನ ರಿಸೀವ್ ಮಾಡಿಕೊಂಡ ಪರಿಗೆ ಫಿದಾ ಆಗಿಬಿಟ್ಟಿದ್ದಾರೆ. ಅಂದಹಾಗೆ ಇದು ಮತ್ತಷ್ಟು ಒಳ್ಳೆಯ ಸಿನಿಮಾ ಮಾಡೋಕೆ ನೀವು ಕೊಡ್ತಿರೋ ಚೈತನ್ಯ ಅಂತ ಯಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ಸಿನಿಮಾದ ಟ್ರೇಲರ್ ಈ ರೇಂಜಿಗೆ ಹವಾ ಸೃಷ್ಟಿಸಿದ್ದು, ಇನ್ನು ಸಿನಿಮಾ ಬಿಡುಗಡೆಯಾದ್ರೆ ಯಾವ ರೀತಿ ಇರತ್ತೆ ಅನ್ನೋದನ್ನ ಕಾದುನೋಡಬೇಕಿದೆ.

https://www.facebook.com/1579757015585037/posts/2463440220550041/

Next Story

RELATED STORIES