Top

ಆ್ಯಸಿಡ್‌ನಲ್ಲಿ ಕರಗಿ ಹೋದ ಪತ್ರಕರ್ತನ ದೇಹ

ಆ್ಯಸಿಡ್‌ನಲ್ಲಿ ಕರಗಿ ಹೋದ ಪತ್ರಕರ್ತನ ದೇಹ
X

ಅಂಕಾರಾ ಟರ್ಕಿ: ಸೌದಿ ಮೂಲದ ಪತ್ರಕರ್ತ ಜಮಲ್ ಖಾಶೋಗ್ಗಿ ಕೊಲೆಗೆ ಸಂಬಂಧಿಸಿದಂತೆ ಭೀಕರ ಸತ್ಯವೊಂದು ಹೊರಬಿದ್ದಿದ್ದು, ಜಮಲ್‌ನನ್ನು ಹತ್ಯೆ ಮಾಡಿದ ನಂತರ ದುಷ್ಕರ್ಮಿಗಳು, ಆತನ ದೇಹವನ್ನು ಆ್ಯಸಿಡ್‌ನಲ್ಲಿ ಮುಳುಗಿಸಿ, ಚರಂಡಿಯಲ್ಲಿ ಬಿಟ್ಟಿದ್ದಾರೆಂದು ಸೌದಿ ಪತ್ರಿಕೆ ವರದಿ ಮಾಡಿದೆ.

ಅಕ್ಟೋಬರ್ 2ರಂದು ಪತ್ರಕರ್ತ ಜಮಲ್ ಖಾಶೋಗ್ಗಿ ಹತ್ಯೆಯಾಗಿದ್ದು, ಆತನ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ರಾಜತಾಂತ್ರಿಕ ಕಚೇರಿಯಿಂದ ಬರುವ ಚರಂಡಿ ನೀರಿನಲ್ಲಿ ಆ್ಯಸಿಡ್ ಅಂಶ ಪತ್ತೆಯಾಗಿದ್ದು, ಇದರ ಬಗ್ಗೆ ಶೋಧ ನಡೆಸಿದಾಗ, ಜಮಲ್‌ ದೇಹವನ್ನು ಆ್ಯಸಿಡ್‌ನಲ್ಲಿ ಮುಳುಗಿಸಿ, ಕರಗಿಸಿ ಚರಂಡಿಯಲ್ಲಿ ಬಿಟ್ಟ ವಿಷಯ ಬಹಿರಂಗವಾಗಿದೆ.

Next Story

RELATED STORIES