Top

ಪೊಲೀಸರ ನಿರೀಕ್ಷಣಾ ಕೊಠಡಿಯಲ್ಲೇ ರಾತ್ರಿ ಕಳೆದ ಜನಾರ್ದನ ರೆಡ್ಡಿ

ಪೊಲೀಸರ ನಿರೀಕ್ಷಣಾ ಕೊಠಡಿಯಲ್ಲೇ ರಾತ್ರಿ ಕಳೆದ ಜನಾರ್ದನ ರೆಡ್ಡಿ
X

ಆ್ಯಂಬಿಡೆಂಟ್ ಸಂಸ್ಥೆಯ ಮಾಲೀಕ ಅಲಿಖಾನ್ ಮತ್ತು ಫರೀದ್ ಜೊತೆ ಅಕ್ರಮ ವಹಿವಾಟು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜೊತೆಗಿನ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿಚಾರಣೆ ಮುಂದುವರಿದಿದ್ದು, ಶನಿವಾರ ರಾತ್ರಿ ಸಿಸಿಬಿ ಕಚೇರಿಯ ನಿರೀಕ್ಷಣಾ ಕೊಠಡಿಯಲ್ಲೇ ಕಳೆಯಬೇಕಾಯಿತು.

ಚಾಮರಾಜಪೇಟೆ ಬಳಿಯ ಸಿಸಿಬಿ ಕಚೇರಿಗೆ ಜನಾರ್ದನ ರೆಡ್ಡಿ ಶನಿವಾರ ಸಂಜೆ ದಿಢೀರನೆ ಆಗಮಿಸಿ ವಿಚಾರಣೆಗೆ ಹಾಜರಾದರು. ಪ್ರಕರಣದಲ್ಲಿ ತಡರಾತ್ರಿ 2.30 ಆದರೂ ಜನಾರ್ದನ ರೆಡ್ಡಿ ವಿಚಾರಣೆ ನಡೆಯಿತು. ನಂತರ ನಿರೀಕ್ಷಣಾ ಕೊಠಡಿಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಮಲಗುವ ವ್ಯವಸ್ಥೆ ಮಾಡಿಕೊಡಲಾಯಿತು.

ಸಿಸಿಬಿ ಕಚೇರಿಗೆ ರೆಡ್ಡಿ ತನ್ನ ಆಪ್ತರಿಂದ ಊಟ ತರಿಸಿಕೊಂಡಿದ್ದು, ಬಾಳೆಹಣ್ಣು, ರೈಸ್​ಬಾತ್ ಹಾಗೂ ಬೆಡ್ ಶೀಟ್ ತರಿಸಿಕೊಂಡ ಜನಾರ್ದನ ರೆಡ್ಡಿ, ಸಿಸಿಬಿ ಕಚೇರಿಯಲ್ಲೇ ಮಲಗಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಜನಾರ್ದನ ರೆಡ್ಡಿ ಅವರನ್ನು ಪೊಲೀಸರು ಮತ್ತೆ ವಿಚಾರಣೆ ಶುರು ಮಾಡಿದರು.

ರಾತ್ರಿ ಸತತ 10 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು, ಆಲಿಖಾನ್ ಮತ್ತು ಫರೀದ್ ಅವರನ್ನು ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿಲ್ಲ. ಅವರ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದರು.

Next Story

RELATED STORIES