ತ್ವಚೆ ಮತ್ತು ಕೂದಲು ಉದುರುವ ಸಮಸ್ಯೆಗೆ ಗ್ರೀನ್ ಟೀ ರಾಮಬಾಣ

ಮಹಿಳೆಯರು ತಮ್ಮ ಸೌಂದರ್ಯಕ್ಕಾಗಿ ಹಲವು ತರಹದ ಪ್ರಯೋಗಗಳನ್ನು ಮಾಡ್ತಾರೆ. ಬ್ಯುಟಿಪಾರ್ಲರ್‌ಗೆ ಹೋಗಿ ಸಾಕಷ್ಟು ಹಣ ಖರ್ಚು ಮಾಡ್ತಾರೆ. ಅಲ್ಲದೇ ಹಲವು ಕ್ರೀಮ್, ಲೋಶನ್‌ಗಳನ್ನ ಬಳಸಿ, ಇರುವ ಸುಂದರವಾದ ತ್ವಚೆಯನ್ನ ಹಾಳು ಮಾಡಿಕೊಳ್ತಾರೆ.

ಇವೆಲ್ಲದರ ಬದಲು ಮನೆಮದ್ದನ್ನ ಉಪಯೋಗಿಸಿ ನಿಮ್ಮ ತ್ವಚೆ ಮತ್ತು ಕೂದಲ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ಗ್ರೀನ್ ಟೀ ಉಪಯೋಗಿಸಿದಲ್ಲಿ, ನೀವು ಉತ್ತಮ ಫಲಿತಾಂಶ ಪಡೆಯಬಹುದು.

ಗ್ರೀನ್ ಟೀಯನ್ನ ಸೇವಿಸುವುದರಿಂದ ಆರೋಗ್ಯವಾಗಿ, ಉಲ್ಲಾಸದಿಂದ ಇರಬಹುದು. ಅದರ ಜೊತೆಗೆ ಇವುಗಳ ಫೇಸ್ ಮಾಸ್ಕ್, ಹೇರ್ ಮಾಸ್ಕ್ ಹಾಕುವ ಮೂಲಕವೂ ಕೂಡ ಸೌಂದರ್ಯವನ್ನ ಕಾಪಾಡಿಕೊಳ್ಳಬಹುದು.

ತ್ವಚೆಯ ಸಮಸ್ಯೆಗೆ ಗ್ರೀನ್ ಟೀ ರಾಮಬಾಣ
1.ಒಂದು ಗ್ರೀನ್ ಟೀ ಪ್ಯಾಕೆಟ್‌ನಲ್ಲಿರುವ ಪೌಡರನ್ನು ಬೌಲ್‌ಗೆ ಹಾಕಿಕೊಳ್ಳಿ. ಅದರೊಂದಿಗೆ ಎರಡು ಚಮಚ ಜೇನುತುಪ್ಪ, ಅರ್ಧ ಚಮಚ ಮೊಸರು ಅಥವಾ ಹಾಲು, ಅರ್ಧ ಚಮಚ ನಿಂಬೆರಸ ಸೇರಿಸಿ. ಇದನ್ನ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ವಿಧಾನ ಪ್ರಯೋಗಿಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.

2..ಒಂದು ಕಪ್ ಗ್ರೀನ್ ಟೀ ಜೊತೆಗೆ, 1 ನಿಂಬೆಹಣ್ಣಿನ ರಸ ಸೇರಿಸಿ. ಈ ಮಿಶ್ರಣವನ್ನ ಸ್ಪ್ರೇ ಬಾಟಲಿಯಲ್ಲಿ ಸೇರಿಸಿ, ಮುಖ ತೊಳೆದ ನಂತರ ಇದನ್ನ ಸಿಂಪಡಿಸಿಕೊಳ್ಳಿ. ದಿನದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿ ತೆರೆದ ರಂಧ್ರಗಳ ಸಮಸ್ಯೆ ಕಡಿಮೆಯಾಗುತ್ತದೆ.

3..ಹೆಚ್ಚಿನವರಿಗೆ ಕಣ್ಣಿನ ಸುತ್ತ ಕಪ್ಪು ಕಾಣಿಸಿಕೊಳ್ಳುತ್ತದೆ. ಗ್ರೀನ್ ಟೀ ಬಳಸುವ ಮೂಲಕ ಈ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳಬಹುದು. ಉಪಯೋಗ ಮಾಡಿದ ಎರಡು ಗ್ರೀನ್ ಟೀ ಬ್ಯಾಗನ್ನ ತೆಗೆದುಕೊಂಡು ಅದನ್ನ 5-6ಗಂಟೆ ತನಕ ರೆಫ್ರಿಜರೇಟರ್‌ನಲ್ಲಿಡಿ. ನಂತರ ತಂಪಾದ ಗ್ರೀನ್ ಟೀ ಬ್ಯಾಗನ್ನ ಕಣ್ಣ ಕೆಳಗೆ ಅಂದರೆ, ಕಲೆಗಟ್ಟಿರುವ ಜಾಗದಲ್ಲಿ 10-15ನಿಮಿಷಗಳ ಕಾಲ ಇರಿಸಿ. ಒಂದು ವಾರ ಹೀಗೆ ಮಾಡುವುದರಿಂದ ಕಣ್ಣಿನ ಸುತ್ತಲಿರುವ ಕಪ್ಪನ್ನ ಹೋಗಲಾಡಿಸಬಹುದು.

4..ಸ್ಟೀಮ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಗ್ರೀನ್ ಟೀಯನ್ನ ಉಪಯೋಗಿಸಿದಲ್ಲಿ ಮುಖದಲ್ಲಿ ತಾಜಾತನ ಬರುತ್ತದೆ.

ಕೂದಲು ಉದುರುವ ಸಮಸ್ಯೆಗೂ ಗ್ರೀನ್ ಟೀ ಮೂಲಕ ಪರಿಹಾರ
1..ಗ್ರೀನ್ ಟೀ ಮಾಡುವಾಗ ಅರ್ಧ ನಿಂಬೆಹಣ್ಣನ್ನು ಅದಕ್ಕೆ ಹಿಂಡಿಕೊಳ್ಳಿ. ನಂತರ ಎರಡು ಚಮಚ ತೆಂಗಿನ ಎಣ್ಣೆ ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿಕೊಳ್ಳಿ. ಇದನ್ನ ಕೂದಲಿಗೆ ಹಚ್ಚಿ 5 ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಅರ್ಧಗಂಟೆ ಬಿಟ್ಟು ಕೂದಲು ತೊಳೆಯಿರಿ.

2..ಮೊಟ್ಟೆ ಮತ್ತು ಗ್ರೀನ್ ಟೀ ಮಾಸ್ಕ್ ಹಾಕುವುದರಿಂದಲೂ ಕೂದಲು ಉದುರುವುದನ್ನು ತಡೆಗಟ್ಟಬಹುದು.

3..ಗ್ರೀನ್ ಟೀ ಬ್ಯಾಗನ್ನ ಬಿಸಿ ನೀರಿನಲ್ಲಿ ಅದ್ದಿ ಆ ನೀರನ್ನ, ತಲೆ ಸ್ನಾನ ಮಾಡುವಾಗ ಕೊನೆಗೆ ಬಳಸುವುದರಿಂದ ಕೂದಲಿನ ಸಮಸ್ಯೆಗಳು ಪರಿಹಾರವಾಗುತ್ತದೆ.

Recommended For You

Leave a Reply

Your email address will not be published. Required fields are marked *