Top

ಧಾರಾಕಾರ ಮಳೆಗೆ ತತ್ತರಿಸಿದ ಸೌದಿ ಅರೇಬಿಯಾ

ಧಾರಾಕಾರ ಮಳೆಗೆ ತತ್ತರಿಸಿದ ಸೌದಿ ಅರೇಬಿಯಾ
X

ಜೆಡ್ಡಾ: ಸೌದಿಅರೇಬಿಯಾದ ಹಲವು ಕಡೆ ಧಾರಾಕಾರ ಮಳೆ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಜೆಡ್ಡಾ, ಕ್ವಾಸಿಮ್, ರಿಯಾದ್, ಮದೀನಾ, ತಾಬುಕ್, ಅಲ್- ಜಾವ್ಫ್ ಎಂಬಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ರಸ್ತೆಗಳಲ್ಲಿ ವಾಹನ ಸಂಚರಿಸುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅತಿಯಾದ ಮಳೆ ಇರುವ ಕಾರಣ ಸೌದಿಯ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕುವೈತ್ ನಗರ ಮಳೆಗೆ ತತ್ತರಿಸಿದ್ದು, ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ವಾಹನಗಳೆಲ್ಲ ಕೊಚ್ಚಿ ಹೋಗಿದೆ.

Next Story

RELATED STORIES