Top

ಕಾಡಾನೆಯ ಕಷ್ಟಕ್ಕೆ ಮಿಡಿದಿರುವ ಗ್ರಾಮಸ್ಥರು

ಕಾಡಾನೆಯ ಕಷ್ಟಕ್ಕೆ ಮಿಡಿದಿರುವ ಗ್ರಾಮಸ್ಥರು
X

ಆ ಗ್ರಾಮದಲ್ಲಿ ರಾತ್ರಿಯಾದರೆ ಸಾಕು ರೈತರಿಗೆ ಅತಂಕ ಶುರುವಾಗ್ತಿತ್ತು. ಕಾಡಾನೆಗಳ ದಾಂಧಲೆಗೆ ಇಡೀ ಗ್ರಾಮವೇ ಹಿಡಿಶಾಪ ಹಾಕಿತು.ಆದರೆ ಇಲ್ಲೊಂದು ಕಾಡಾನೆಯ ಕಷ್ಟಕ್ಕೆ ಗ್ರಾಮಸ್ಥರ ಮನ ಮಿಡಿದಿರುವ ಘಟನೆ ಬೆಂಗಳೂರಿನ ಹೊರವಲಯ ಆನೇಕಲ್​ನಲ್ಲಿ ನಡೆದಿದೆ.

ಬಾವಿಯಲ್ಲಿ ಬಿದ್ದು ಮೇಲೆ ಬರಲಾಗದೆ ಒದ್ದಾಡ್ತಿರೋ ಆನೆ. ಮೇಲೆ ನಿಂತು ಆನೆಯ ಕಷ್ಟವನ್ನು ನೋಡ್ತಿರೋ ಜನ. ಕಾಡಿನಲ್ಲಿ ರಾಜನಂತೆ ಮೆರೆದು, ನಾಡಿಗೆ ಬಂದು ಒಂದಷ್ಟು ಜನಸಾಮಾನ್ಯರಿಗೆ ತೊಂದರೆ ಕೊಟ್ಟು ವಾಪಸ್ ಹೋಗ್ತಿದ್ದ ಕಾಡನೆ ಇಂದು ಬಾವಿಗೆ ಬಿದ್ದು ನರಳಾಡ್ತಿತ್ತು.

ತಮಿಳುನಾಡು ಗಡಿಭಾಗದ ಹೊಸೂರು ಬಳಿ ಇರುವ ಉಪ್ಪುಪುಳಂ ಗ್ರಾಮದಲ್ಲಿ ಆಗಿಂದ್ದಾಗ್ಗೆ ಕಾಡಾನೆಗಳ ಹಿಂಡು ಹಾಗಾಗೇ ಪ್ರತ್ಯಕ್ಷವಾಗ್ತಾಲೇ ಇರುತ್ತವೆ. ಈ ಹಿಂಡಿನಿಂದ ತಪ್ಪಿಸಿಕೊಂಡು ಬಂದಿದ್ದ 8 ವರ್ಷದ ಗಂಡಾನೆ, ಕಳೆದ ರಾತ್ರಿ 40 ಅಡಿ ಆಳದ ಬಾವಿಗೆ ಬಿದ್ದಿತ್ತು. ಮೇಲೆ ಬರಲಾಗದೇ ರಾತ್ರಿಯಿಡೀ ಬಾವಿಯಲ್ಲೇ ನರಳಾಡುತ್ತಿದೆ.

ಮುಂಜಾನೆ ಕಾಡಾನೆ ಕಷ್ಟವನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಕಾಡಾನೆಯ ರಕ್ಷಣೆಗೆ ಶುರು ಮಾಡಿದರು. ಜೆಸಿಬಿ ಮೂಲಕ ಕಾಲುವೆ ರೀತಿ ಜಾಗ ಮಾಡಿ, ಕಾಡಾನೆಯನ್ನು ರಕ್ಷಿಸಿದರು. ಇನ್ನು ಈ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರ ದಂಡೇ ಬಾವಿಯ ಬಳಿ ಸೇರಿತ್ತು.

ಒಟ್ಟಾರೆ ಸತತ ನಾಲ್ಕು ಗಂಟೆಗಳ ಯಶಸ್ವಿ ಕಾರ್ಯಾಚರಣೆ ಬಳಿಕ ಮೇಲೆ ಬಂದ ಕಾಡಾನೆ, ಬದುಕಿತು ಬಡ ಜೀವ ಎನ್ನುವಂತೆ ಕಾಡನತ್ತ ಪ್ರಯಣ ಬೆಳಸಿತ್ತು . ಇನ್ನು ಕಾಡಾನೆಯ ಜೀವ ರಕ್ಷಿಸಿದ ಅರಣ್ಯ ಸಿಬ್ಬಂದಿಗೆ ಗ್ರಾಮಸ್ಥರು ಧನ್ಯವಾದ ಅರ್ಪಿಸಿದರು.

Next Story

RELATED STORIES