ವಿರೋಧದ ಮಧ್ಯೆ ನಡೀತು ಟಿಪ್ಪು ಜಯಂತಿ

ಟಿಪ್ಪು ಸುಲ್ತಾನ್ ಜಯಂತಿಯನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಜಯಂತಿ ಮಾಡಿಯೇ ತೀರುತ್ತೇವೆ. ಅಡ್ಡಿಪಡಿಸಿದರೆ ಬಂಧಿಸೋದಾಗಿ ಹೇಳಿದರು. ಆದರೆ ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆರೋಗ್ಯದ ಕಾರಣ ನೀಡಿ ಗೈರಾದರು. ಇನ್ನೊಂದೆಡೆ ಡಿಸಿಎಂ ಪರಮೇಶ್ವರ್ ಕೂಡ ಕಾರ್ಯಕ್ರಮಕ್ಕೆ ಗೈರಾದರು.
ಇದು ಕೇವಲ ಕಾಟಾಚಾರದ ಜಯಂತಿ ಮಾಡ್ತಿದ್ಧಾರಾ ಏನ್ನೋವ ಅನುಮಾನ ಹುಟ್ಟುಹಾಕಿದಂತಾಯ್ತು. ಇವರಿಬ್ಬರ ಗೈರಿನಿಂದಾಗಿ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಟಿಪ್ಪುವಿನಿಂದಲೇ ರಾಮನಗರಕ್ಕೆ ಸಿಲ್ಕು ಬಂದಿದ್ದು. ಶ್ರೀರಂಗಪಟ್ಟಣ, ನಂಜುಂಡೇಶ್ವರ ಹಾಗೂ ಶೃಂಗೇರಿ ಮಠಕ್ಕೂ ಅನುದಾನ ನೀಡಿದರು ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಜಯಂತಿಯನ್ನು ಈ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು.ಕುಮಾರಸ್ವಾಮಿ ಅದನ್ನು ಬಾಂಕ್ವೆಟ್ ಹಾಲ್ಗೆ ಸ್ಥಳಾಂತರಿಸಿದರು. ಮಾತ್ರವಲ್ಲ ಸಂಜೆ ನಡೆಯಬೇಕಿದ್ದ ಕಾರ್ಯಕ್ರಮವನ್ನ ಬೆಳಗ್ಗೆ 11.30ಕ್ಕೆ ಬದಲಿಸಿದರು. ಕಾರ್ಯಕ್ರಮ ಸ್ಥಳ ಹಾಗೂ ಸಮಯ ಬದಲಾವಣೆ ಆಗಿದ್ದರಿಂದ ಬರುವ ಜನರ ಸಂಖ್ಯೆ ಕಡಿಮೆಯಾಗಿತ್ತು. ಮಾತ್ರವಲ್ಲ ಸಾಕಷ್ಟು ಗೊಂದಲಮಯ ವಾತಾವರಣ ಏರ್ಪಟ್ಟಿತ್ತು.
ಸಚಿವ ಜಮೀರ್ ಅಹ್ಮದ್, ರೋಷನ್ ಬೇಗ್, ಜಯಮಾಲ ಭಾಗವಹಿಸಿದ್ದು, ಸಮುದಾಯದ ಜನರಲ್ಲಿ ಕೊಂಚ ಸಮಾಧಾನ ಮೂಡಿಸಿತ್ತು. ಈ ವೇಳೆ ಮಾತನಾಡಿದ ಜಮೀರ್ ಬಿಜೆಪಿಯ ವಿರುದ್ಧ ಹರಿಹಾಯ್ದರು. ಯಡಿಯೂರಪ್ಪ ಅವರ ದ್ವಂದ್ವ ನಿಲುವನ್ನೂ ಪ್ರಶ್ನಿ ಮಾಡಿದರು.
ಪರ ವಿರೋಧದ ಮಧ್ಯೆ ಟಿಪ್ಪು ಜಯಂತಿ ಆಚರಣೆ ನಡೆಯಿತು. ಮೂರು ಪಕ್ಷಗಳೂ ಕೂಡ ಈ ವಿಷಯವನ್ನು ನೋಟ್ ಬ್ಯಾಂಕ್ ದಾಳವಾಗಿ ಬಳಸಿಕೊಳ್ಳುತ್ತಿವೆ. ಇದಕ್ಕಾಗಿ ಪರ ಹಾಗೂ ವಿರೋಧದ ಮುಖವಾಡ ಹಾಕುತ್ವೆ ಅನ್ನೋದು ಸತ್ಯವಾಗಿದೆ.