Top

ತನ್ನ ಉದ್ಯಮಿಗಳಲ್ಲಿ ಕ್ಷಮೆಯಾಚಿಸಿದ ಗೂಗಲ್..!

ತನ್ನ ಉದ್ಯಮಿಗಳಲ್ಲಿ ಕ್ಷಮೆಯಾಚಿಸಿದ ಗೂಗಲ್..!
X

ಗೂಗಲ್ ಕಚೇರಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಆರೋಪವನ್ನು ನಿರ್ಲಕ್ಷಿಸಿದ್ದಕ್ಕೆ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದನ್ನು ನಿರ್ಲ್ಯಕ್ಷಿಸಿದ್ದಕ್ಕೆ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆ ನಡೆಸುವ ಮೂಲಕ ಗೂಗಲ್ ಕಚೇರಿಗಳಿಂದ 20,000ಕ್ಕೂ ಹೆಚ್ಚು ಉದ್ಯೋಗಿಗಳು ಗೂಗಲ್‌ನಿಂದ ಹೊರನಡೆದಿದ್ದರು.

ಈ ಕಾರಣಕ್ಕಾಗಿ ಗೂಗಲ್ ಕ್ಷಮೆಯಾಚಿಸಿದ್ದು, ಕಂಪೆನಿಯ ಮಹಿಳಾ ಉದ್ಯೋಗಿಗಳಿಗೆ ಸುರಕ್ಷತೆ ಒದಗಿಸುತ್ತೇವೆ, ಮತ್ತು ಕಚೇರಿಯಲ್ಲಿ ಹಲವು ಬದಲಾವಣೆಗಳನ್ನು ತರುತ್ತೇವೆಂದು ಹೇಳಿದೆ.

ಈ ಬಗ್ಗೆ ಕ್ಷಮೆ ಕೋರಿ ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈ, ಆ ಪತ್ರದಲ್ಲಿ, ನಮ್ಮಿಂದ ತಪ್ಪಾಗಿದ್ದನ್ನ ನಾವು ಒಪ್ಪಿಕೊಳ್ಳುತ್ತೇವೆ, ಮಮತ್ತು ಅದಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇವೆ ಎಂದು ಹೇಳಿದ್ದಾರೆ.

Next Story

RELATED STORIES