Top

ಟಿಪ್ಪುನಂತೆ ಸಿದ್ದರಾಮಯ್ಯ ಕೂಡ ಮತಾಂಧ: ಈಶ್ವರಪ್ಪ

ಟಿಪ್ಪುನಂತೆ ಸಿದ್ದರಾಮಯ್ಯ ಕೂಡ ಮತಾಂಧ: ಈಶ್ವರಪ್ಪ
X

ಟಿಪ್ಪುಗಿಂತಲೂ ಸಿದ್ದರಾಮಯ್ಯ ಮತಾಂಧ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಹೇಳಿಕೆಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್​.ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ‌ ಮತಾಂಧ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಿದ್ದರಾಮಯ್ಯ ಅವರನ್ನು ಟಿಪ್ಪುಗೆ ಹೋಲಿಸಿರೋದು ಎಷ್ಟರಮಟ್ಟಿಗೆ ಸರಿ ಅನ್ನೋದು ನನಗೆ ಗೊತ್ತಿಲ್ಲ ಎಂದರು.

ಕಣ್ಣೆದುರು 21 ಜನ ಯುವಕರ ಕಗ್ಗೊಲೆಯಾಯ್ತು. ಆಗ ಸಿದ್ದರಾಮಯ್ಯ ಕೊಲೆಗಡುಕರ ವಿರುದ್ಧ ಕ್ರಮ ಕೈಗೊಂಡಿದ್ದರೆ ಸಿದ್ದರಾಮಯ್ಯರನ್ನು ಸರಿಯಾದ ಮುಖ್ಯಮಂತ್ರಿ ಎಂದು ಒಪ್ಪುತ್ತಿದ್ದೆ. ಕೊಲೆಗಡುಕರನ್ನು ಬಿಟ್ಟು ಕೋಮುವಾದಿ ಹತ್ತಿಕ್ಕುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಒಬ್ಬ ಮತಾಂಧ ಅನ್ನೋದನ್ನು ಒಪ್ಪುತ್ತೇನೆ ಎಂದು ಈಶ್ವರಪ್ಪ ಸಮರ್ಥಿಸಿಕೊಂಡರು.

ಹಿಂದೂ ಮುಸ್ಲಿಂ ದೂರ ಆಗಲು ಕಾಂಗ್ರೆಸ್ ಕಾರಣ. ಬಿಜೆಪಿ ಅಧಿಕಾರ ಇದ್ದಾಗ ಹಿಂದೂ ಮುಸ್ಲಿಂ ಗಲಭೆ ಆಗಿಲ್ಲ. ಇತಿಹಾಸವೇ ಹೇಳುತ್ತದೆ ಟಿಪ್ಪು ಒಬ್ಬ ಕೊಲೆಗಾರ ಎಂದು. ಬಿಜೆಪಿ 104 ಸ್ಥಾನ ಪಡೆದಿದ್ದರೆ ಕಾಂಗ್ರೆಸ್ 78 ಸ್ಥಾನ ಪಡೆದಿದೆ. ಟಿಪ್ಪು ಜಯಂತಿ ಆಚರಿಸಿದ್ದಕ್ಕೆ ಹೀಗೆ ಆಗಿರುವುದು. ಈ ಬಗ್ಗೆ ಜಮೀರ್ ಮಾತನಾಡಲಿ ಎಂದರು.

ಕುಮಾರಸ್ವಾಮಿ ದೂರ ಉಳಿದಿರೋದಕ್ಕೆ ಕಾರಣ ಏನು? ಕುಟ್ಟಪ್ಪ ಮನೆ ಭೇಟಿ ವೇಳೆ ಟಿಪ್ಪು ಜಯಂತಿ ಮಾಡೋದಿಲ್ಲ ಎಂದು ಹೇಳಿರೋದು ಮನ ಸಾಕ್ಷಿ ಕಾಡುತ್ತಿರಬೇಕು. ರೈತರ ಸಾಲಮನ್ನಾ ಮಾಡಲು ದುಡ್ಡು ಇಲ್ಲದೆ ಇರೋದಕ್ಕೆ ಕುಮಾರಸ್ವಾಮಿ ಅವರಿಗೆ ಸಂದಿಗ್ಧತೆ ಕಾಡಿರಬಹುದು. ಆದರೆ ಟಿಪ್ಪು ಜಯಂತಿ ಆಚರಣೆ ವಿಚಾರ ದಲ್ಲಿ ಸಿಎಂ ಗೆ ಸಂದಿಗ್ಧತೆ ಯಾಕೆ ಬರುತ್ತೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಮೋದಿ ಸುಡುವ ಕಾಲ ಬಂದಿದೆ ಎಂಬ ಹೇಳಿಕೆಯನ್ನು ಟಿ.ಬಿ‌.ಜಯಚಂದ್ರ ಅವರಿಂದ ನಿರೀಕ್ಷಿಸಿರಲಿಲ್ಲ. ಕಾನೂನು ಮಂತ್ರಿಯಾದವರು ಇಂತಹದರಿಂದಲೇ ಅಧಿಕಾರವನ್ನ, ಮಂತ್ರಿ ಸ್ಥಾನವನ್ನ ಕಳೆದುಕೊಂಡವರು. ಇಂತವರು ಕತ್ತೆ ಮೇಲು ಮೆರವಣಿಗೆ ಮಾಡಲು ಯೋಗ್ಯರಲ್ಲ. ಯಾಕಂದ್ರೆ ಕತ್ತೇ ಮೇಲೆ ಮೆರವಣಿಗೆ ಮಾಡಿದ್ರೆ ಕತ್ತೆ ಸಹ ಶ್ರಮಜೀವಿ ಎಂದಿದ್ದಾರೆ. ಈ ರೀತಿ ಹಗುರವಾಗಿ ಮಾತನಾಡಬಾರದು ಎಂದು ಈಶ್ವರಪ್ಪ ನುಡಿದರು.

Next Story

RELATED STORIES