3ನೇ ಟಿ-20: ಈಡೇರುವುದೇ ಭಾರತದ ಕ್ಲೀನ್ಸ್ವೀಪ್ ಆಸೆ?

ಸತತ ಎರಡು ಗೆಲುವಿನಿಂದ ಬೀಗುತ್ತಿರುವ ಭಾರತ ತಂಡ ಭಾನುವಾರ ನಡೆಯುವ 3ನೇ ಹಾಗೂ ಅಂತಿಮ ಟಿ-20 ಪಂದ್ಯವನ್ನೂ ಗೆದ್ದು ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ಸ್ವೀಪ್ ಸಾಧನೆಯ ಕನಸು ಕಾಣುತ್ತಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆದ್ದು ಸಮಾಧಾನಪಟ್ಟುಕೊಳ್ಳುವ ಗುರಿ ವೆಸ್ಟ್ ಇಂಡೀಸ್ ತಂಡಕ್ಕಿದೆ. ಆದರೆ ಬ್ಯಾಟ್ಸ್ಮನ್ಗಳ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದೆ.
ಭಾರತ ತಂಡ ಇದೇ ಮೊದಲ ಬಾರಿ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಚೆನ್ನೈನಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ರಿಷಭ್ ಪಂತ್ ಮತ್ತು ಸ್ಥಳೀಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಡುವ ನಿರೀಕ್ಷೆ ಇದೆ.
ರೋಹಿತ್ ಶರ್ಮ ಅದ್ಭುತ ಫಾರ್ಮ್ನಲ್ಲಿದ್ದಾರೆ. ಮತ್ತೊಂದೆಡೆ ಶಿಖರ್ ಧವನ್ ಕೂಡ ರನ್ ಗಳಿಸುತ್ತಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನ ಇಲ್ಲದೇ ಇದ್ದರೂ ಫಾರ್ಮ್ ಕೊರತೆ ಬಗ್ಗೆ ಅನುಮಾನಗಳಿವೆ.
ಬೌಲಿಂಗ್ ವಿಭಾಗದಲ್ಲಿ ಪ್ರಯೋಗಕ್ಕೆ ತಂಡ ಮುಂದಾಗಿರುವುದರಿಂದ ತಂಡದ ಬೆಂಚ್ ಸಾಮರ್ಥ್ಯದ ಬಗ್ಗೆ ಪರೀಕ್ಷೆಯಾಗುವ ಸಾಧ್ಯತೆ ಇದೆ.