ಬೌನ್ಸರ್ಗೆ ಮೈದಾನದಲ್ಲೇ ಕುಸಿದುಬಿದ್ದ ಪಾಕಿಸ್ತಾನ ಬ್ಯಾಟ್ಸ್ಮನ್!

ಪಾಕಿಸ್ತಾನದ ಎಡಗೈ ಆರಂಭಿಕ ಇಮಾಮ್ ಉಲ್ ಹಕ್ ನ್ಯುಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಗಾಯಗೊಂಡು ಮೈದಾನದಲ್ಲೇ ಕುಸಿದುಬಿದ್ದ ಘಟನೆ ಶುಕ್ರವಾರ ನಡೆದಿದೆ. ತೀವ್ರವಾಗಿ ಗಾಯಗೊಂಡ ಇಮಾಮ್ ಉಲ್ ಹಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಮಾಮ್ ಉಲ್ ಹಕ್ ಹೆಲ್ಮೇಟ್ ಧರಿಸಿದ್ದರೂ ಮಧ್ಯಮ ವೇಗಿ ಲೂಕಿ ಫಾರ್ಗ್ಯೂಸನ್ ಅವರ ಬೌನ್ಸರ್ ತಲೆಗೆ ಬಡಿಯಿತು. ಇದರಿಂದ ಸ್ಥಳದಲ್ಲೇ ಕುಸಿದುಬಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಇಮಾಮ್ ಅವರಿಗೆ ಯಾವುದೇ ಗಂಭೀರ ಹೊಡೆತ ಬಿದ್ದಿಲ್ಲ. ಆದರೆ 48 ಗಂಟೆಗಳ ಕಾಲ ನಿಗಾ ವಹಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಒಡ್ಡಿದ 210 ರನ್ಗಳ ಸಾಧಾರಣ ಗುರಿ ಬೆಂಬತ್ತಿದ ಪಾಕಿಸ್ತಾನದ ತಂಡ ಸುಲಭ ಗೆಲುವು ದಾಖಲಿಸಿ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿತು. ಆದರೆ ಆರಂಭಿಕ ಇಮಾಮ್ 16 ರನ್ ಗಳಿಸಿದ್ದಾಗ ಚೆಂಡು ಬಡಿದ ಘಟನೆ ನಡೆಯಿತು. ತಲೆ ಸುತ್ತು ಬಂದಂತಾಗಿ ಇಮಾಮ್ ಸ್ಥಳದಲ್ಲೇ ಕುಸಿದು ಬಿದ್ದರು.
Get well soon #ImamUlHaq pic.twitter.com/MaR0MZPIaM
— Ramiz Ahmed Patel (@ramizrap1) November 9, 2018