Top

ಮಗಳ ಸಾವಿನಲ್ಲೂ ಮಾನವೀಯತೆ ಮೆರೆದ ಪೋಷಕರು

ಮಗಳ ಸಾವಿನಲ್ಲೂ ಮಾನವೀಯತೆ ಮೆರೆದ ಪೋಷಕರು
X

ಪ್ರವಾಸಕ್ಕೆಂದು ತೆರಳಿದ್ದ ಶಾಲಾ ಮಕ್ಕಳ ಬಸ್‌ , ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ವಿದ್ಯಾರ್ಥಿನಿ ದಿಯಾ ಸಾವನಪ್ಪಿರುವ ಘಟನೆ ಇಂದು ಮುಂಜಾನೆ ಚಿಕ್ಕಮಗಳೂರು ಜಿಲ್ಲೆ ಎನ್​. ಆರ್​ ಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದ ಬಳಿ ನಡೆದಿದೆ.

ಇನ್ನು ಐವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ,ಉಳಿದ ​ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದ್ಯ ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗೊಂದಿಗೆ ಪಾರಾಗಿದ್ದು ಎನ್​. ಆರ್​ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ದಿಯಾ ತಂದೆ ನಿವೃತ್ತ ಕರ್ನಲ್‌ ರಾಜೇಂದ್ರ ಸಿಂಗ್‌ ಶೇಖಾವತ್‌ ಮಗಳ ನೇತ್ರದಾನದ ಜೊತೆಗೆ ಹಲವು ಅಂಗಾಂಗಗಳ ದಾನ ಮಾಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಟ್ಟಿನಲ್ಲಿ ಬಾಳಿ ಬದುಕಬೇಕಾಗಿದ್ದ

ಮುಗ್ದ ಜೀವವೊಂದು ಅಪಘಾತದಲ್ಲಿ ದುರಂತ ಸಾವು ಕಂಡಿದ್ದು, ಪೋಷಕರು ಮಗಳ ಸಾವಿನಲ್ಲೂ ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಆ ದೇವರು ಪೋಷಕರಿಗೆ ದುಖಃವನ್ನು ತಡೆದುಕೊಳ್ಳೋ ಶಕ್ತಿ ನೀಡಲಿ ಎನ್ನೋದು ಪ್ರತಿಯೊಬ್ಬರ ಆಶಯ.

Next Story

RELATED STORIES