Top

ಶೃತಿ ಹರಿಹರನ್ ಪರವಾಗಿ ನಾನು ಎಲ್ಲಿಯೂ ಮಾತನಾಡಿಲ್ಲ: ನಟ ಚೇತನ್

ಶೃತಿ ಹರಿಹರನ್ ಪರವಾಗಿ ನಾನು ಎಲ್ಲಿಯೂ ಮಾತನಾಡಿಲ್ಲ: ನಟ ಚೇತನ್
X

ಅರ್ಜುನ್ ಸರ್ಜಾ ವಿರುದ್ಧವಾಗಿ , ಶೃತಿ ಹರಿಹರನ್ ಪರವಾಗಿ ನಾನು ಎಲ್ಲಿಯೂ ಮಾತನಾಡಿಲ್ಲ.ನಾನು ಮಾತನಾಡಿದ್ದು ಕೇವಲ ಲೈಂಗಿಕ ದೌರ್ಜನ್ಯ ಬಗ್ಗೆ ಎಂದು ನಟ ಚೇತನ್ ಹೇಳಿದ್ದಾರೆ.

ಅಕ್ಟೋಬರ್ 21ರ ಫೈರ್ ಮಾಧ್ಯಮಸುದ್ದಿಗೊಷ್ಟಿಯ ನಂತರ ನನಗೆ ಅರ್ಜುನ ಸರ್ಜಾ ರವರ ಕಡೆಯಿಂದ ಬೆದರಿಕೆಯ ಕರೆ ಬರುತ್ತಿವೆ. ಮಾನಸಿಕ ನೋವಾಗಿದೆ. ಶೃತಿ ಹರಿಹರನ್ ನಮ್ಮ ಫೈರ್ ವೇದಿಕೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿಲ್ಲ. ಶೃತಿ ನಮ್ಮ ಫೈರ್ ಸಂಸ್ಥೆಯ ಸದಸ್ಯರು ಹಾಗಾಗಿ ಅವತ್ತು ಮಾಧ್ಯಮಗೋಷ್ಠಿಗೆ ಬಂದಿದ್ದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಮ್ಮ ಬಳಿ ಅವರು ಯಾವುದೇ ಕಂಪ್ಲೆಂಟ್ ಕೂಡ ಕೊಟ್ಟಿಲ್ಲ ಎಂದರು.

ಮೀಟೂ ಆರೋಪ ಪ್ರತ್ಯಾರೋಪದ ಹಿನ್ನಲೆಯಲ್ಲಿ ನಟ ಆದಿನಗಳು ಚೇತನ್ ಮಾಧ್ಯಮದವರನ್ನು ಕರೆದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನಗೆ ಯಾವುದೇ ರೀತಿಯ ದ್ವೇಷಮನೋಭಾವಗಳು ಅರ್ಜುನ್ ಸರ್ಜಾರ ಮೇಲೆ ಇಲ್ಲ. ಅವರು ಕೊಟ್ಟ ಆಡ್ವಾನ್ಸ್ ಹಣವನ್ನು ವಾಪಸ್ ಬೇಡ ಮುಂದಿನ ಸಿನಿಮಾಕ್ಕೆ ಕ್ಯಾರಿಫಾರ್ವಡ್ ಮಾಡಿಕೋ ಎಂದು ಅವರೇ ಮೇಲ್ ಮಾಡಿದ್ದಾರೆ. ಆದರೆ ನನಗೆ ಕೆಲವರು ಮೋಸ ಮಾಡಿದ್ದಾರೆ ಎಂದು ಸಾರುತ್ತಿದ್ದಾರೆ ಎಂದಿದ್ದಾರೆ.

ಶೃತಿ ಹರಿಹರನ್ ಗಿಂತ ಮುಂಚೆಯೇ ನನಗೆ ಅರ್ಜುನ್ ಸರ್ಜಾರವರು ಗೊತ್ತು , ಅವರ ನನ್ನ ನಡುವೆ ಯಾವುದೆ ದ್ವೇಷವಿಲ್ಲ ಎಂದು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕಾಡು ಜನರಿಗಾಗಿ, ಲೈಂಗಿಕಾ ಅಲ್ಪಸಂಖ್ಯಾತರಿಗಾಗಿ, ಹಾಗೂ ಲೈಂಗಿಕಾ ದೌರ್ಜನ್ಯಕ್ಕೆ ಒಳಗಾಗದ ಪರವಾಗಿ ಅನ್ಯಾಯದ ವಿರುದ್ಧವಾಗಿ ಹೋರಾಟ ಮಾಡುವ ಪ್ರಯತ್ನದಲ್ಲಿ ಇದ್ದೇನೆ ಎಂದು ನಟ ಚೇತನ್ ಹೇಳಿದರು.

Next Story

RELATED STORIES