Top

3ನೇ ಟಿ-20ಯಿಂದ ಪ್ರಮುಖ ಬೌಲರ್​ಗಳಿಗೆ ವಿಶ್ರಾಂತಿ: ಸಿದ್ಧಾರ್ಥ್​ ಕೌಲ್ ಅವಕಾಶ

3ನೇ ಟಿ-20ಯಿಂದ ಪ್ರಮುಖ ಬೌಲರ್​ಗಳಿಗೆ ವಿಶ್ರಾಂತಿ: ಸಿದ್ಧಾರ್ಥ್​ ಕೌಲ್ ಅವಕಾಶ
X

ಭಾರತದ ಪ್ರಮುಖ ಬೌಲರ್​ಗಳಾದ ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಕುಲದೀಪ್ ಯಾದವ್ ಅವರಿಗೆ ಭಾನುವಾರ ಚೆನ್ನೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ.

ಭಾರತ ತಂಡ ಈಗಾಗಲೇ 2-0ಯಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಇದೀಗ ಮಹತ್ವ ಕಳೆದುಕೊಂಡಿದೆ. ಭಾರತ ಗೆದ್ದರೆ ಕ್ಲೀನ್​ಸ್ವೀಪ್ ಸಾಧನೆ ಮಾಡಲಿದ್ದರೆ, ವೆಸ್ಟ್ ಜಯ ಸಾಧಿಸಿದರೆ ಸರಣಿಯ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲಿದೆ.

ಮಧ್ಯಮ ವೇಗಿ ಸಿದ್ಧಾರ್ಥ್​ ಕೌಲ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೌಲ್ ಈಗಾಗಲೇ 2 ಟಿ-20 ಹಾಗೂ 3 ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ಪ್ರವಾಸವನ್ನು ಗಮನದಲ್ಲಿರಿಸಿಕೊಂಡಿರುವ ಭಾರತ ತಂಡ ಪ್ರಮುಖ ಆಟಗಾರರಿಗೆ ಸಾಧ್ಯವಾದಷ್ಟು ವಿಶ್ರಾಂತಿ ನೀಡಲು ಬಯಸಿದೆ. ಉಳಿದಂತೆ ಬ್ಯಾಟ್ಸ್​ಮನ್​ಗಳಿಗೆ ವಿಶ್ರಾಂತಿ ನೀಡು ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.

ಖಲೀಲ್ ಅಹ್ಮದ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಉಳಿಸಿಕೊಳ್ಳಲಾಗಿದೆ. ಶಾರ್ದೂಲ್ ಠಾಕೂರ್​ ಮತ್ತು ಕೌಲ್ ದಾಳಿಯ ನೇತೃತ್ವ ವಹಿಸಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಕೃನಾಲ್ ಪಾಂಡ್ಯ ಸ್ಪಿನ್ ದಾಳಿಯ ನೇತೃತ್ವ ವಹಿಸಬಹುದು.

Next Story

RELATED STORIES