Top

ನಟ ವಿನೋದ್ ರಾಜ್ ಹಣ ದೋಚಿದ್ದು ಯಾರು ಗೊತ್ತಾ..?

ನಟ ವಿನೋದ್ ರಾಜ್ ಹಣ ದೋಚಿದ್ದು ಯಾರು ಗೊತ್ತಾ..?
X

ಬೆಂಗಳೂರು: ಕೆಲ ದಿನಗಳ ಹಿಂದೆ ನಟ ವಿನೋದ್‌ರಾಜ್‌ನನ್ನು ಯಾಮಾರಿಸಿ ಒಂದು ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ಒಂದು ತಿಂಗಳ ಹಿಂದೆ ನೆಲಮಂಗಲದಲ್ಲಿ ಅಭಿಮಾನಿಯ ಸೋಗಿನಲ್ಲಿ ಬಂದಿದ್ದ ಖತರ್ನಾಕ್ ಕಳ್ಳ ಹೈಟೆಕ್ ರಾಜು, ವಿನೋದ್ ರಾಜ್‌ಗೆ ಸೇರಿದ್ದ ಒಂದು ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ.

ಹೈಟೆಕ್ ರಾಜ

ಈ ಬಗ್ಗೆ ವಿನೋದ್ ರಾಜ್ ಪೊಲೀಸರಿಗೆ ದೂರು ನೀಡಿದ್ದು, ಸಿಪಿಐ ಅನಿಲ್ ಕುಮಾರ್ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿ ರಾಜ್‌ನನ್ನು ಬಂಧಿಸಿದ್ದಾರೆ.

ಬಂಧಿತ ಹೈಟೆಕ್ ರಾಜ ಓಜಿಕುಪ್ಪಂ ಮೂಲದವನು ಎಂದು ತಿಳಿದು ಬಂದಿದ್ದು, ಕದ್ದ ಹಣದಿಂದ ಐಶಾರಮಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

Next Story

RELATED STORIES