ಜೀವಂತವಾಗಿ ಮೋದಿ ಸುಡುವ ಕಾಲ ಬಂದಿದೆ: ಟಿ.ಬಿ ಜಯಚಂದ್ರ

ಪ್ರಧಾನಿ ನರೇಂದ್ರ ಮೋದಿಯನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಟಿ.ಬಿ ಜಯಚಂದ್ರ ಹೇಳಿದರು.
ನೋಟು ಅಮಾನೀಕರಕಣ ವಿರುದ್ಧ ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಧ್ಯಮದರೊಂದಿಗೆ ಮಾತನಾಡಿದ ಅವರು, 50 ದಿನ ಕಾಲವಕಾಶ ಕೊಡಿ ನೋಟ್ ಬ್ಯಾನ್ನಲ್ಲಿ ಗೆದ್ದು ಬರುತ್ತೇನೆ, ಬರದೆ ಇದ್ದರೆ ನನ್ನನ್ನು ಜೀವಂತವಾಗಿ ಸುಡಿ ಎಂದು ಮೋದಿ ಹೇಳಿದ್ದರು.
ಮೋದಿ ಹೇಳಿದ ಹಾಗೆ ನೋಟ್ ಬ್ಯಾನ್ ವಿಚಾರದಲ್ಲಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಹೀಗಾಗಿ ಬಹುಶಃ ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ಜಯಚಂದ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜಿನಾಮೇ ಕೊಟ್ಟು ಮನೆಗೆ ಹೊಗಬೇಕು. ಕೇಂದ್ರ ಸರ್ಕಾರದ ನಡಿಗೆ ಕತ್ತೆಗೆ ಹೋಲಿಕೆಯಾಗುತ್ತೆ ಅದು ಇಂದು ಏನೂ ಕೆಲಸ ಮಾಡಿಲ್ಲ.ಮೋದಿ ಮಾಡಿದ ಕೆಲಸವೆಲ್ಲ ಗುಳ್ಳೆನರಿ ಕೆಲಸ ಎಂದರು.
ಇಂದು ನಡೆಯುತ್ತೀರುವ ಪ್ರತಿಭಟನೆಗೆ ಆ ಗುಳ್ಳೆನರಿ ಮೋದಿ ಬಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಎಂದು ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯನ್ನು ಗುಳ್ಳೆನರಿಗೆ ಹೋಲಿಸುವ ಮೂಲಕ ಸಚಿವ ಟಿ.ಬಿ ಜಯಚಂದ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.