Top

ಪುಣ್ಯಕೋಟಿ ಕಥೆ ಹೇಳಲು ಬರ್ತಿದ್ದಾರೆ ರಕ್ಷಿತ್ ಶೆಟ್ಟಿ

ಪುಣ್ಯಕೋಟಿ ಕಥೆ ಹೇಳಲು ಬರ್ತಿದ್ದಾರೆ ರಕ್ಷಿತ್ ಶೆಟ್ಟಿ
X

ಶೆಟ್ರು ಮತ್ತೆ ತಮ್ಮ ಡೈರೆಕ್ಷನ್ ಕರಾಮತ್ತು ತೋರಿಸಲು ಬರ್ತಿದ್ದಾರೆ. ಅದಕ್ಕಾಗಿ ಸಕಲ ತಯಾರಿ ಕೂಡ ನಡೆಸುತ್ತಿದ್ದಾರೆ. ಇತ್ತೀಚೆಗೆ ಬ್ರೇಕಪ್ ನಿಂದ ಸದ್ದು ಸುದ್ದಿ ಮಾಡಿದ ಶೆಟ್ರು ಸೈಲೆಂಟ್ ಆಗಿ ನಟನೆ, ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ರು.

ಇದೀಗ ನಿರ್ದೇಶನಕ್ಕೆ ಮತ್ತೆ ಕಂ ಬ್ಯಾಕ್​ ಮಾಡ್ತಿರೋ ಶೆಟ್ರು ನಟನೆ ಮತ್ತು ಸ್ಕ್ರಿಪ್ಟ್ ರೈಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಇರೋ ಮಾಹಿತಿ ಪ್ರಕಾರ ಚಿತ್ರಕ್ಕೆ ಪುಣ್ಯಕೋಟಿ ಎಂದು ಟೈಟಲ್​ ಇಡಲಾಗಿದ್ದು, ರಕ್ಷಿತ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಉಳಿದವರು ಕಂಡಂತೆ ಸಿನಿಮಾ ಪ್ರೇಕ್ಷಕನಿಗೆ ಹೊಸ ಅನುಭವ ನೀಡಿತ್ತು. ಸಿನಿಮಾ ಬಾಕ್ಸಾಫೀಸ್​ನಲ್ಲಿ ಸೌಂಡ್ ಮಾಡ್ದೆ ಇದ್ರೂ, ರಕ್ಷಿತ್ ಪ್ರತಿಭೆಗೆ ಶಹಬ್ಬಾಶ್ ಗಿರಿ ಸಿಕ್ಕಿತ್ತು.

ವಿದೇಶಿ ಸಿನಿಮಾಗಳ ರೀತಿಯಲ್ಲಿ ಉಳಿದವರು ಕಂಡಂತೆ ಕಥೆಯನ್ನ ರಕ್ಷಿತ್ ಕಟ್ಟಿಕೊಟ್ಟಿದ್ದ ಬಗೆಗೆ ಬೆರಗಾಗಿದ್ರು. ಅದೇ ರಕ್ಷಿತ್ ಮತ್ತೊಂದು ಸಿನಿಮಾ ನಿರ್ದೇಶನ ಮಾಡ್ತಾರೆ ಅಂದ್ರೆ, ಕುತೂಹಲ ಸಹಜ. ಅದೇ ಕುತೂಹಲ ಈ ಪುಣ್ಯಕೋಟಿ ಸಿನಿಮಾ ಮೇಲೆ ಮೂಡಿದೆ.

ಅಷ್ಟಕ್ಕೂ ರಕ್ಷಿತ್ ಶೆಟ್ಟಿ ಪುಣ್ಯಕೋಟಿ ಕಥೆ ಹೇಳಹೊರಟಿರೋ ವಿಷ್ಯ ಅನಾವರಣ ಮಾಡಿದ್ದು ಶೆಟ್ರ ಕುಚಿಕು ಗೆಳೆಯ ರಿಷಭ್ ಶೆಟ್ಟಿ. ರಿಷಭ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಕ್ಷಿತ್ ಕಳಿಸಿದ್ದ ಪೋಟೋ ಶೇರ್ ಮಾಡಿ ಹೊಸ ಜರ್ನಿಗೆ ಶುಭ ಹಾರೈಸಿದ್ದಾರೆ.

ಸದ್ಯ ಪುಣ್ಯಕೋಟಿ ಕಥೆ ಹೇಳ ಹೊರಟಿರೋ ಶೆಟ್ರು ಕಥೆ ಗೀಚುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಸ್ವತಃ ತಾವೇ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾಹಿತಿ ರಕ್ಷಿತ್ ಆಪ್ತ ಮೂಲಗಳಿಂದ ತಿಳಿದು ಬಂದಿದ್ದು, ಆಫೀಶಿಯಲ್ ಆಗಿ ಇಲ್ಲಿವರೆಗೂ ರಕ್ಷಿತ್ ಚಿತ್ರ ನಿರ್ದೇಶನದ ಬಗ್ಗೆ ಹೇಳಿಕೊಂಡಿಲ್ಲ.

ರಕ್ಷಿತ್ ಡೈರೆಕ್ಷನ್​ಗೆ ವಾಪಾಸ್ಸಾಗುತ್ತಿದ್ಧಾರೆ ಎಂದಾಗ ಎಲ್ಲೆಡೆ ಕೇಳಿ ಬಂದಿದ್ದು ಕಿಚ್ಚ ಸುದೀಪನಿಗೆ ಶೆಟ್ರು ಸಿನಿಮಾ ಮಾಡ್ತಿದ್ದಾರಾ ಅಂತ. ಈ ರೀತಿ ಟಾಕ್ ಕೇಳಿ ಬರೋಕು ರೀಸನ್​​ ಇದೆ.

ಈ ಹಿಂದೆ ರಕ್ಷಿತ್ ಸುದೀಪನಿಗೆ ಆಕ್ಷನ್ ಕಟ್ ಹೇಳೋದಾಗಿ ಸುದ್ದಿಯಾಗಿತ್ತು, ಚಿತ್ರಕ್ಕೆ ಥಗ್ಸ್​​​​ ಆಫ್ ಮಾಲ್ಗುಡಿ ಎಂದು ಟೈಟಲ್ ಕೂಡ ಫಿಕ್ಸ್ ಆದ ಸುದ್ದಿ ಗಾಂದೀನಗರದಲ್ಲಿ ಭಾರೀ ಸೇಲ್ ಆಗಿತ್ತು.

ಅದಾದ ಮೇಲೆ ಇವ್ರಿಬ್ರ ಕಾಂಭಿನೇಷನ್ ಸಿನಿಮಾ ಸದ್ದೇ ಇರಲಿಲ್ಲ. ಈಗ ರಕ್ಷಿತ್ ಮತ್ತೆ ಕಥೆ ಗೀಚಲು ಕೂತಿರೋದು ನೋಡಿದ್ರೆ ಮೋಸ್ಟ್ಲೀ ಸುದೀಪನಿಗೆ ಕಥೆ ಬರೆಯುತ್ತಿದ್ದಾರೇನೋ ಎಂಬ ಅನುಮಾನ ಎಲ್ಲರಿಗೂ ಸಹಜವಾಗಿ ಕಾಡಿದ್ದು ಸುಳ್ಳಲ್ಲ.

ಸದ್ಯಕ್ಕೆ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಣ, ನಟನೆ ಅಂತ ಫುಲ್ ಪ್ಯಾಕ್​ ಆಗಿದ್ದಾರೆ.. ಅವನೇ ಶ್ರೀಮನ್ನಾರಾಯಣ,, 777 ಚಾರ್ಲಿ, ತೇನಾಲಿ ಸಿನಿಮಾಗಳ ನಟನೆಯಲ್ಲಿ ಬ್ಯುಸಿ ಇರೋ ರಕ್ಷಿತ್ ಇದೆಲ್ಲ ಮುಗಿದ ನಂತರ ಡೈರೆಕ್ಷನ್ ಫೀಲ್ಡ್​ಗೆ ಇಳಿಯಲಿದ್ದಾರೆ. ಅಂದ್ರೆ 2019ರಲ್ಲಿ ಅಂದ್ರೆ ಬರೋಬ್ಬರಿ ಐದು ವರ್ಷದ ನಂತರ ಮತ್ತೆ ಆಕ್ಷನ್ ಕರಾಮತ್ತು ತೋರಿಸಲಿದ್ದಾರೆ.

ಪುಣ್ಯಕೋಟಿ ಮತ್ತು ಹುಲಿಯ ಕಥೆ ಎಲ್ಲರಿಗೂ ಗೊತ್ತೇಯಿದೆ. ಇದೇ ಕಥೆಯನ್ನ ಹಿನ್ನೆಲೆಯಲ್ಲಿಟ್ಟುಕೊಂಡು ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೇಳೋಕೆ ರಕ್ಷಿತ್ ಮತ್ತು ಸೆವೆನ್​ ಆ್ಯಡ್ಸ್​​ ತಂಡದ ಜೊತೆ ಈ ಸಿನಿಮಾ ಕಟ್ಟಿಕೊಡ್ತಿದ್ದಾರೆ.

ಇಷ್ಟು ದಿನ ರಶ್ಮಿಕಾ -ರಕ್ಷಿತ್ ಬ್ರೇಕಪ್​​ ವಿಷ್ಯದಿಂದಲೇ ಸುದ್ದಿಯಾಗುತ್ತಿದ್ದ ಶೆಟ್ರು ಈಗ ಸಂಪೂರ್ಣ ಸಿನಿಮಾ ಧ್ಯಾನದಲ್ಲಿದ್ದಾರೆ. ಈ ಹೊಸ ಸುದ್ದಿ ಶೆಟ್ರ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಬಾಸ್ ಈಸ್ ಬ್ಯಾಕ್ ಅಂತ ದಿಲ್ ಖುಷ್ ಆಗಿದ್ದಾರೆ.

ಭಾರತಿ ಜಾವಳ್ಳಿ, ಎಂಟಟೈನ್ಮೆಂಟ್ ಬ್ಯುರೋ ಟಿವಿ5

Next Story

RELATED STORIES