Top

ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ: ಎಚ್.ಡಿ.ರೇವಣ್ಣ

ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ: ಎಚ್.ಡಿ.ರೇವಣ್ಣ
X

ಎಲ್ಲಕ್ಕಿಂತ ನನಗೆ ಪಕ್ಷ ಮುಖ್ಯವಾಗಿದ್ದು, ಒಂದು ವೇಳೆ ಅಗತ್ಯ ಬಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷ ಪ್ರಮುಖವಾಗಿದೆ. ಅಧಿಕಾರಗಿಂತ ನನಗೆ ಪಕ್ಷ ಮುಖ್ಯ. ಸಿಎಂ ಕುಮಾರಸ್ವಾಮಿ ಏನು ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಇದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಆದರೆ, ವಿಸ್ತರಣೆಗೆ ಯಾವುದೇ ಸಮಸ್ಯೆ ಇಲ್ಲ. ನನ್ನ ಪ್ರಕಾರ ಸಂಪುಟ ವಿಸ್ತರಣೆ ಬೇಗ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ತೆಗೆಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇಂಧನ ಖಾತೆ ಕೇಳುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಹೆಚ್ಚುವರಿಯಾಗಿ ಇಂಧನ ಖಾತೆ ನೀಡಿದರೆ ನಿಭಾಯಿಸಲು ಸಿದ್ಧ. ನನಗೆ ಯಾವ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಆದರೆ, ಎಲ್ಲಕ್ಕಿಂತ ನನಗೆ ಪಕ್ಷ ಮುಖ್ಯ. ಪಕ್ಷ ಅಧಿಕಾರದಲ್ಲಿ ಇದ್ದರರಷ್ಟೇ ನಮಗೆ ಅಧಿಕಾರ. ಇದು ನಮಗೆ ತಿಳಿದಿರಬೇಕು. ಒಂದು ವೇಳೆ ಸಂಕಷ್ಟದ ಸಂದರ್ಭ ಎದುರಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದರು.

ಇನ್ನು ಕಾಗೋಡು ತಿಮ್ಮಪ್ಪಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ರೇವಣ್ಣ, ಅವರು ಬಯಸಿದರೆ ಸಚಿವ ಸ್ಥಾನ ನೀಡುವುದಕ್ಕೆ ಅಭ್ಯಂತರ ಇಲ್ಲ. ಅವರು ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನ ಅಗತ್ಯ ಇದೆ ಎಂದು ತಿಳಿಸಿದರು.

Next Story

RELATED STORIES