Top

ಸದ್ದಿಲ್ಲದೇ ಸೆಟ್ಟೇರಿದೆ ಶಿವಣ್ಣ- ಪಿ. ವಾಸು ಕಾಂಬಿನೇಷನ್​ ಸಿನಿಮಾ

ಸದ್ದಿಲ್ಲದೇ ಸೆಟ್ಟೇರಿದೆ ಶಿವಣ್ಣ- ಪಿ. ವಾಸು ಕಾಂಬಿನೇಷನ್​ ಸಿನಿಮಾ
X

ಹಾರರ್​ ಸಸ್ಪೆನ್ಸ್​ ಸಿನಿಮಾಗಳ ಸರದಾರ ಪಿ. ವಾಸು, ನಿರ್ದೇಶನ ಮತ್ತು ಕರುನಾಡ ಕುಳ್ಳ ದ್ವಾರಕೀಶ್​​ ನಿರ್ಮಾಣದ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್​​ ನಟಿಸ್ತಾರೆ ಅನ್ನೋ ಸುದ್ದಿ ಕೇಳಿಬಂದಿದೆ. ಇದೀಗ ಮುಹೂರ್ತ ನೆರವೇರಿಸಿ, ಅಧಿಕೃತವಾಗಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ.

ಶಿವಲಿಂಗ ಸೂಪರ್ ಸಕ್ಸಸ್ ನಂತ್ರ ಪಿ. ವಾಸು ಮತ್ತು ಶಿವಣ್ಣನ ಕಾಂಬಿನೇಷನ್​​ನಲ್ಲಿ ಮತ್ತೊಂದು ಸಿನಿಮಾ ಶುರುವಾಗಿದೆ. ವಿಶೇಷ ಅಂದ್ರೆ ದ್ವಾರಕೀಶ್​ ನಿರ್ಮಾಣದ 52ನೇ ಸಿನಿಮಾ ಇದು. ಈ ಹಿಂದೆ ದ್ವಾರಕೀಶ್​ ನಿರ್ಮಾಣದಲ್ಲಿ ಪಿ. ವಾಸು ನಿರ್ದೇಶಿಸಿದ ಆಪ್ತಮಿತ್ರ ಸಿನಿಮಾ ಬಾಕ್ಸಾಫೀಸ್​ ಶೇಕ್ ಮಾಡಿತ್ತು. ಈ ಮೂವರ ಕಾಂಬಿನೇಷನ್​​ನಲ್ಲಿ ಬರ್ತಿರೋ ಹೊಸ ಸಿನಿಮಾ ಕುತೂಹಲ ಕೆರಳಿಸಿದೆ.

ನಗರದ ದೇವಸ್ಥಾನವೊಂದರಲ್ಲಿ ಪೂಜೆ ನೆರವೇರಿಸಿ, ಪ್ರೊಡಕ್ಷನ್​ ನಂಬರ್ 52 ಸಿನಿಮಾಗೆ ಚಾಲನೆ ನೀಡಲಾಯ್ತು. ಪಿ. ವಾಸು ನಿರ್ದೇಶನದ ಆಪ್ತಮಿತ್ರ, ಆಪ್ತರಕ್ಷಕ ಸಿನಿಮಾಗಳಿಗೆ ಸಂಗೀತ ನೀಡಿದ ಗುರುಕಿರಣ್​ ಪ್ರೊಡಕ್ಷನ್​ ನಂಬರ್ 52 ಸಿನಿಮಾಗಳು ಟ್ಯೂನ್ ಹಾಕಲಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಶಿವಣ್ಣನ ಜೊತೆ ಡಿಂಪಲ್ ಬ್ಯೂಟಿ ರಚಿತಾ ರಾಮ್​ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.

ಆಟಗಾರ ನಂತ್ರ ಮತ್ತೊಂದು ಸದಭಿರುಚಿಯ ಸಿನಿಮಾ ಮಾಡ್ತಿರೋದಕ್ಕೆ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಖುಷಿಯಾಗಿದ್ರು. ಮೇಯರ್ ಮುತ್ತಣ್ಣನ ನಂತ್ರ ದೊಡ್ಮನೆ ಫ್ಯಾಮಿಲಿ ಹೀರೋ ಸಿನಿಮಾ ಮಾಡ್ತಿರೋ ಖುಷಿ ಹಂಚಿಕೊಂಡ್ರು.

ಹಾರರ್ ಸಸ್ಪೆನ್ಸ್ ಸಿನಿಮಾಗೆ ಮ್ಯೂಸಿಕ್ ಪ್ರಮುಖ ಪಾತ್ರ ವಹಿಸುತ್ತೆ. ಈಗಾಗಲೇ ದ್ವಾರಕೀಶ್, ಪಿ. ವಾಸು ಮತ್ತು ಶಿವಣ್ಣನ ಸಿನಿಮಾಗಳಿಗೆ ಕೆಲಸ ಮಾಡಿ ಗೆದ್ದಿರೋ ಗುರುಕಿರಣ್ ಮತ್ತೊಂದು ಸೂಪರ್ ಹಿಟ್ ಆಲ್ಬಮ್​ ಕೊಡೋ ಉತ್ಸಾಹದಲ್ಲಿದ್ದಾರೆ.

ಇನ್ನೂ ಚಿತ್ರಕ್ಕೆ ಆನಂದ್​ ಅನ್ನೋ ಟೈಟಲ್​​​ ಫೈನಲ್ ಮಾಡೋ ಲೆಕ್ಕಾಚಾರದಲ್ಲಿ ಚಿತ್ರತಂಡವಿದೆ. ಶಿವಣ್ಣನ ಚೊಚ್ಚಲ ಸಿನಿಮಾದ ಸೂಪರ್ ಹಿಟ್ ಟೈಟಲ್​ ಅದು. ಸದ್ಯ ಪೂಜೆ ನೆರವೇರಿಸಿ, ಚಿತ್ರಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಡಿಸೆಂಬರ್​ನಲ್ಲಿ ಶೂಟಿಂಗ್ ಪ್ರಾರಂಭಿಸಿ, ಮುಂದಿನ ವರ್ಷ ಚಿತ್ರವನ್ನ ತೆರೆಗೆ ತರೋ ಸನ್ನಾಹದಲ್ಲಿದೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES