Top

ನೋಟ್ ಬ್ಯಾನ್​ಗೆ ನಮೋ ವೆಂಕಟೇಶ ಅಂದ ಮಟಾಶ್ ಟೀಂ

ನೋಟ್ ಬ್ಯಾನ್​ಗೆ ನಮೋ ವೆಂಕಟೇಶ ಅಂದ ಮಟಾಶ್ ಟೀಂ
X

ದೇಶದಲ್ಲಿ ನೋಟ್ ಬ್ಯಾನ್ ಮಾಡಿ ಎರಡು ವರ್ಷ ಕಳೀತು. ಆದ್ರೆ ಎರಡು ವರ್ಷದ ಹಿಂದೆ ನೋಟ್ ಬ್ಯಾನ್ ಮಾಡಿದಾಗ, ರಾತ್ರೋ ರಾತ್ರಿ ಎಲ್ಲರಿಗೂ ಶಾಕ್. ಆ ಎರಡು ತಿಂಗಳು ಹೆಣಗಾಟ. ಬ್ಯಾಂಕ್ ಮುಂದೆ ಕ್ಯೂ. ಎಟಿಮ್​ ಮುಂದೆ ನೋ ಕ್ಯಾಶ್ ಬೋರ್ಡ್,ಅಬ್ಬಬ್ಬಾ ಒಂದಾ ಎರಡಾ ಪಟ್ಟ ಪರಿಪಾಟಲು. ಇದನ್ನೆಲ್ಲ ಬೆಳ್ಳಿತೆರೆ ಮೇಲೆ ತರುವ ಪ್ರಯತ್ನ ಮಾಡಿದೆ 'ಮಟ್ಯಾಶ್' ಟೀಮ್.

ಮಟಾಶ್ ಹೇಳಲಿದೆ ನೋಟ್​ ಬ್ಯಾನ್ ಕಥೆ-ವ್ಯಥೆ.!

ನಮೋ ವೆಂಕಟೇಶ ಅಂತಿದ್ದಾರೆ ಮಟಾಶ್ ಟೀಂ.!

ಸ್ಯಾಂಡಲ್​ವುಡ್​ನಲ್ಲಿ ಜುಗಾರಿ ಕ್ರಾಸ್, ಲಾಸ್ಟ್ ಬಸ್‌ನಂತಹ ಸದಭಿರುಚಿ ಸಿನಿಮಾಗಳನ್ನ ನೀಡಿ ಹೆಸರು ಮಾಡಿರೋ ಎಸ್ ಡಿ ಅರವಿಂದ್ ನಿರ್ದೇಶನದಲ್ಲಿ ಬರ್ತಿರೋ ಸಿನಿಮಾ ಮಟಾಶ್.

ಸದ್ಯ ಈ ಚಿತ್ರದ ಹಾಡು ಯೂ ಟ್ಯೂಬ್​ನಲ್ಲಿ ಸಖತ್ ಸೌಂಡ್​ ಮಾಡ್ತಿದೆ. ನೋಟ್​ ಬ್ಯಾನ್ ಸಿಚುವೇಷನ್ ಕಟ್ಟಿಕೊಡೊ ನಮೋ ವೆಂಕಟೇಶ ಸಾಂಗ್​ಗೆ ಕವಿರಾಜ್ ಸಾಹಿತ್ಯ ಗೀಚಿದ್ದಾರೆ.

ನಮೋ ವೆಂಕಟೇಶ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮಟಾಶ್ ಸಿನಿಮಾ ಇದೇ ತಿಂಗಳು ತೆರೆಗೆ ಬರ್ತಿದೆ. ಅರವಿಂದ್ ನಿರ್ದೇಶನದ ಜೊತೆ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಕೂಡ ಮಾಡಿದ್ದಾರೆ.

ಮಟಾಶ್ ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಕೂಡ ದನಿಯಾಗಿದ್ದು, ಜವಾರಿ ಭಾಷೆಯಲ್ಲಿರೋ ಚಜ್ಜಿ ರೊಟ್ಟಿ ಚವಳಿಕಾಯಿ ಸಾಂಗ್ ಕೂಡ ಸಿಕ್ಕಾಪಟ್ಟೆ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಈಗ ನಮೋ ವೆಂಕಟೇಶ ಸಾಂಗ್ ವೈರಲ್ ಆಗ್ತಿದೆ.

ಬಹುತೇಕ ಹೊಸ ಪ್ರತಿಭೆಗಳು ಮಟಾಶ್ ಚಿತ್ರದಲ್ಲಿದ್ದಾರೆ. ಪೋಸ್ಟರ್ ಹಾಗೂ ಟೀಸರ್ ನಿಂದ ಮೆಚ್ಚುಗೆ ಪಡೆದಿರೋ ಮಟಾಶ್ ನೋಟ್​ ಬ್ಯಾನ್ ಚರಿತ್ರೆಯ ಮಜಲುಗಳನ್ನ ಹೇಗೆ ಕಟ್ಟಿಕೊಡಲಿದೆ.

ಮಾಸ್ ಟೈಟಲ್ ಇರೋ ಈ ಸಿನಿಮಾ ಹೇಳ ಹೊರಟಿರೋದಾದ್ರೂ ಏನು. ಸಿನಿಮಾ ರಿಲೀಸ್​ ವರೆಗೂ ಕಾಯಲೇ ಬೇಕು.

ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES