Top

ಕೆ.ಜಿ.ಎಫ್​ ಚಿತ್ರದ ಟ್ರೇಲರ್​ ನೋಡಿ ತಾರೆಯರು ಹೇಳಿದ್ದೇನು..?

ಕೆ.ಜಿ.ಎಫ್​ ಚಿತ್ರದ ಟ್ರೇಲರ್​ ನೋಡಿ ತಾರೆಯರು ಹೇಳಿದ್ದೇನು..?
X

ರಾಕಿಂಗ್​ ಸ್ಟಾರ್​ ಯಶ್​​ ಅಭಿನಯದ ಬಹುನಿರೀಕ್ಷಿತ ಕೆ.ಜಿ.ಎಫ್​ ಚಿತ್ರದ ಟ್ರೇಲರ್​ ಇಂದು ರಿಲೀಸ್​ ಆಗಿದೆ. ಬಹು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳ ನಿರೀಕ್ಷೆಗೆ ಇಂದು ತೆರೆ ಬಿದ್ದಿದೆ.

ಸ್ಯಾಂಡಲ್​ವುಡ್​​ನಲ್ಲಿ ಬಹುದಿನಗಳಿಂದ ಸುದ್ದಿ ಮಾಡ್ತಿದ್ದ ಹೈ ವೋಲ್ಟೇಜ್ ಸಿನಿಮಾ ಕೆಜಿಎಫ್. ಚಿತ್ರದ ಟ್ರೇಲರ್ ಯಾವಾಗ ರೀಲೀಸ್ ಆಗುತ್ತೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಅಂತೂ ಇಂತೂ ಟ್ರೇಲರ್ ನೋಡೋ ಭಾಗ್ಯ ಸಿಕ್ಕಿದೆ.

ಇದೀಗ ಕೆಜಿಎಫ್ ಟ್ರೇಲರ್ ರಿಲೀಸ್ ಆಗಿದ್ದು ಸಿನಿಮಾ ಬಗ್ಗೆ, ಚಿತ್ರದ ಸ್ಟೋರಿ ಲೈನ್ ಹಿಂಟ್ ಸಿಕ್ಕಿದೆ. ಟ್ರೇಲರ್​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಮಾಸ್ ಎಂಡ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಬೀದಿಗಳಲ್ಲಿ ಮತ್ತು ಕೋಲಾರದದ ಚಿನ್ನದ ಗಣಿಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಟ್ರೇಲರ್ ಮೂಲಕವೇ ಚಿತ್ರದ ಅದ್ದೂರಿ ಮೇಕಿಂಗ್ ಎದ್ದು ಕಾಣ್ತಿದೆ.

ಇನ್ನು ಇವತ್ತಿನ ಅದ್ದೂರಿ ಟ್ರೇಲರ್ ಲಾಂಚ್ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಬರೆದಿದ್ದು, ಕನ್ನಡ ಮಾಧ್ಯಮ ಸೇರಿದಂತೆ ತಮಿಳು, ತೆಲುಗು, ಕೇರಳ, ಮಹರಾಷ್ಟ್ರ, ಮತ್ತು ಬಾಲಿವುಡ್ ಮಾಧ್ಯಮದವ್ರು ಹಾಗು ಪತ್ರಕರ್ತರು ಆಗಮಿಸಿದರು. ಇನ್ನು ಕನ್ನಡ ಟ್ರೇಲರ್ ಗೆ ಅದ್ದೂರಿ ಚಾಲನೆ ನೀಡಿದ್ದು ರೆಬಲ್ ಸ್ಟಾರ್ ಅಂಬರೀಶ್.

ಕಾಲಿವುಡ್​ನಿಂದ ನಟ ವಿಶಾಲ್, ಬಾಲಿವುಡ್​ನಿಂದ ಅನಿಲ್ ತದಾನಿ, ಟಾಲಿವುಡ್ ಹಾಗು ಮಾಲಿವುಡ್ ಚಿತ್ರರಂಗದ ವಿತರಕರು ಭಾಗಿಯಾಗಿ ಟ್ರೇಲರ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಯಶ್ ಮಾತನಾಡಿ ಇದು ಕನ್ನಡ ಚಿತ್ರರಂಗದಲ್ಲಿ ಒಂದು ಮೊದಲ ಹೆಜ್ಜೆ. ಇದು ಯಶ್ ಸಿನಿಮಾ ಅಲ್ಲ ಕನ್ನಡ ಚಿತ್ರರಂಗದ ತಾಕತ್ತು ಎಂದು ಹೇಳಿದರು. ಇನ್ನು ರಾಧಿಕಾ ಪಂಡಿತ್ ಕೂಡ ಟ್ರೇಲರ್ ನೋಡಿ ಖುಷಿ ಪಟರು

ಕೆಜಿಎಫ್ ಡಿಸೆಂಬರ್ 21ಕ್ಕೆ ಭಾರತದಾದ್ಯಂತ ತೆರೆಗೆ ಬರಲಿದ್ದು, ಸದ್ಯ ರಿಲೀಸ್ ಆಗಿರೋ ಟ್ರೇಲರ್ ಟ್ರೆಂಡಿಂಗ್​ನಲ್ಲಿದ್ದು, ಹೊಸ ಮೈಲಿಗಲ್ಲು ಬರೆಯಲು ಕೆಜಿಎಫ್ ರೆಡಿಯಾಗಿದೆ.

Next Story

RELATED STORIES