Top

ಜನಾರ್ದನ್ ರೆಡ್ಡಿ ಮತ್ತು ಸಿಸಿಬಿ ಲಿಗಲ್ ಫೈಟ್

ಜನಾರ್ದನ್ ರೆಡ್ಡಿ ಮತ್ತು ಸಿಸಿಬಿ ಲಿಗಲ್ ಫೈಟ್
X

ಆ್ಯಂಬಿಡೆಂಟ್ ವಿರುದ್ಧದ ಇಡಿ ಕೇಸ್ ಖುಲಾಸೆಗೊಳಿಸಲು 20 ಕೋಟಿ ಡೀಲ್ ಪ್ರಕರಣದ ಆರೋಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಧ್ಯಂತರ ನಿರೀಕ್ಷಣಾ ಅರ್ಜಿಯನ್ನು ಸಲ್ಲಿಸಿ ಹಿಂಪಡೆದಿದ್ದಾರೆ.

ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆಷನ್ಸ್​ ಕೋರ್ಟ್​ ನ್ಯಾಯಧೀಶರು ವಿಚಾರಣೆ ನಡೆಸಿದರು. ಈ ವೇಳೆ ರೆಡ್ಡಿ ಪರ ಹಿರಿಯ ವಕೀಲ ಸಿ.ಹೆಚ್. ಹನುಂತರಾಯ ವಾದ ಮಂಡಿಸಿ, ಇದೆ ಭಾನುವಾರ ವಿಚಾರಣೆಗೆ ಸಿಸಿಬಿ ಮುಂದೆ ಹಾಜರಾಗುವುದಾಗಿ ಕೋರ್ಟ್​ಗೆ ಭರವಸೆ ನೀಡುತ್ತೇನೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಧೀಶ ವಿದ್ಯಾಧರ ಶಿರಹಟ್ಟಿ ಅವರು, ನೀವು ಯಾವ ಆಧಾರದ ಮೇಲೆ ಬಂಧಿಸುತ್ತಾರೆ ಎಂದು ಹೇಳಿತ್ತೀದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೆಡ್ಡಿ ಪರ ವಕೀಲರು, ಸಿಸಿಬಿ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಹೇಳಿಕೆಗಳನ್ನು ನೀಡಿ, ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಧೀಶರು, ಯಾವುದೇ ಬಂಧನದ ಭೀತಿ ಇಲ್ಲ, ಪತ್ರಿಕಾ ಪ್ರಕಟಣೆ ಮೇಲೆ ವಾದ ಮಂಡಿಸುವುದಾದರೇ ಮಧ್ಯಂತರ ಅರ್ಜಿ ವಜಾಗೊಳಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ಮಧ್ಯಂತರ ಅರ್ಜಿಯನ್ನು ಹಿಂಪಡೆಯುವುದಾಗಿ ರೆಡ್ಡಿ ಪರ ವಕೀಲ ಕೋರ್ಟ್​ಗೆ ತಿಳಿಸಿದ್ರು. ಇದನ್ನು ದಾಖಲಿಕೊಂಡ ನ್ಯಾಯಧೀಶರು, ಸಿಸಿಬಿ ಪರ ಸರ್ಕಾರಿ ಅಭಿಯೋಜಕರಿಗೆ ನೋಟಿಸ್​ ಜಾರಿಗೊಳಿಸಿದೆ. ರೆಡ್ಡಿ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಅರ್ಜಿ ವಿಚಾರಣೆಯನ್ನು ನವೆಂಬರ್​ 12ಕ್ಕೆ ಮುಂದೂಡಿದರು.

ಇದೇ ವೇಳೆ ಜನಾರ್ದನ ರೆಡ್ಡಿ ಸಿಸಿಬಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದು ಹಾಗೂ ಸಿಸಿಬಿ ತನಿಖಾಧಿಕಾರಿಗಳಾದ ಡಿಸಿಪಿ ಗಿರೀಶ್ ​ಹಾಗೂ ಎಸಿಪಿ ವೆಂಕಟೇಶ್​ ಪ್ರಸನ್ನರನ್ನು ಬದಲಾವಣೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಸಿಬಿ ರಾಜಕೀಯ ದುರುದ್ದೇಶದಿಂದ ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಹಾಗೂ ಡಿಸಿಪಿ ಎಸ್.ಗಿರೀಶ್ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ. ಪ್ರಕರಣದಲ್ಲಿನ ಆರೋಪಿ ಸಂಖ್ಯೆ ೪ ಆದ, ಬಳ್ಳಾರಿಯ ರಾಜಮಹಲ್ ಜ್ಯೂವೆಲರ್ಸ್ ಮಾಲೀಕ ರಮೇಶ್ ಅವರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ನನ್ನ ವಿರುದ್ಧ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಆ ಮೂಲಕ ರೆಡ್ಡಿ ಸಿಸಿಬಿ ನಡುವಿನ ಹೋರಾಟ ತಾರಕಕ್ಕೇರಿದೆ.

ಜಿ.ಮಂಜುನಾಥ ಕ್ರೈಂ ಬ್ಯೂರೋ ಟವಿ5 ಬೆಂಗಳೂರು.

Next Story

RELATED STORIES