Top

ರೆಡ್ಡಿಯಷ್ಟೇ ಡಿಕೆಶಿ ಕೂಡ ಭ್ರಷ್ಟ: ಎಸ್​.ಆರ್​. ಹೀರೇಮಠ

ರೆಡ್ಡಿಯಷ್ಟೇ ಡಿಕೆಶಿ ಕೂಡ ಭ್ರಷ್ಟ: ಎಸ್​.ಆರ್​. ಹೀರೇಮಠ
X

ಗಣಿ ಅಕ್ರಮದಲ್ಲಿ ಸಿಲುಕಿದ್ದ ಜನಾರ್ದನ ರೆಡ್ಡಿಯಷ್ಟೇ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕೂಡ ಕಡು ಭ್ರಷ್ಟ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್. ಹಿರೇಮಠ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ಜನಾರ್ದನ ರೆಡ್ಡಿ ಇಡೀ ಬಳ್ಳಾರಿಯನ್ನೇ ಲೂಟಿ ಮಾಡಿದರು. ಆತನ ಹಗಲು ದರೋಡೆಕೋರ. ಅವನಷ್ಟೇ ಡಿ.ಕೆ. ಶಿವಕುಮಾರ್ ಕೂಡ ಭ್ರಷ್ಟ. 15 ಸಾವಿರ ಕೋಟಿ ರೂ.ಲೂಟಿ ಮಾಡಲು ಡಿಕೆಶಿ ಬಳ್ಳಾರಿಗೆ ಹೋಗಿದ್ದಾರೆ ಎಂದರು.

ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಗಣಿ ರೆಡ್ಡಿ ವಿರುದ್ಧ ಭಾಷಣ‌ ಮಾಡಿದರು. ಆಮೇಲೆ ಏನೂ ಮಾಡಲಿಲ್ಲ. 5 ವರ್ಷ ಆಡಳಿತ ನಡೆಸಿದರೂ ಸಿದ್ದರಾಮಯ್ಯ ಗಣಿ ಮಾಫಿಯಾಗೆ ಮಟ್ಟ ಹಾಕಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಣಿ ಲೂಟಿ ಮಾಡಿದವರ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲವಾಗಿವೆ ಎಂದು ಹಿರೇಮಠ ಆರೋಪಿಸಿದರು.

ಆ್ಯಂಬಿಡೆಂಟ್ ಸಂಸ್ಥೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಚಿನ್ನದ ಗಟ್ಟಿ ಕಿಕ್ ಬ್ಯಾಕ್ ಪ್ರಕರಣದಲ್ಲಿ ಸರ್ಕಾರ ಬೆಟ್ಟಹಗೆದು ಇಲಿ ಹಿಡಿಯಲು ಹೊರಟಿದೆ. ರೆಡ್ಡಿಯ ದೊಡ್ಡ ಹಗರಣ ಬಿಟ್ಟು 18 ಕೋಟಿ‌ ಹಿಂದೆ ಬಿದ್ದಿದೆ ಎಂದು ಅವರು ಹೇಳಿದರು.

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅಧಿಕಾರಕ್ಕೆ ಬಂದು ಏನೂ ಮಾಡಲಿಲ್ಲ. ವಿಶ್ವನಾಥ್ ಶೆಟ್ಟಿ ಯಾವ ಸ್ಥಾನದಲ್ಲಿ ಕೂತಿದ್ದಾರೆ ಎಂಬುದನ್ನೇ ಮರೆತಂತಿದೆ. ಭಾಸ್ಕರ್ ಶೆಟ್ಟಿ ಮಾಡಿದ್ದನ್ನು ನೀವು ಮಾಡಬೇಡಿ.

ನಿಮ್ಮನ್ನು ಲೋಕಾಯುಕ್ತ ಸ್ಥಾನಕ್ಕೆ ಕೂರಿಸಿದ್ದು ಕೆಲಸ ಮಾಡಲು. ಕಾಲ ಕಳೆಯಲು ಅಲ್ಲ ಎಂದು ಹಿರೇಮಠ ಸಲಹೆ ನೀಡಿದರು.

Next Story

RELATED STORIES