Top

ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದೂಡಿಕೆ ಸಾಧ್ಯತೆ?

ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದೂಡಿಕೆ ಸಾಧ್ಯತೆ?
X

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದಕ್ಕೆ ಹೋಗುವ ಲಕ್ಷಣಗಳು ಕಾಣ್ತಿವೆ. ಉಪಚುನಾವಣೆಯ ನಂತರ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡ್ತೇವೆ ಎಂದು ರಾಜ್ಯನಾಯಕರು ಹೇಳಿದ್ದರು.ಅದರೆ ಬೈ ಎಲೆಕ್ಷನ್ ಮುಗಿದರು ಹೈಕಮಾಂಡ್ ನಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಪಂಚ ಕ್ಷೇತ್ರಗಳ ಉಪಚುನಾವಣೆಯ ಬಳಿಕ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡುವುದಾಗಿ ರಾಜ್ಯ ನಾಯಕರು ಸ್ಪಷ್ಟ ಭರವಸೆ ನೀಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಆಕಾಂಕ್ಷಿಗಳು ಸುಮ್ಮನಾಗಿದ್ದರು. ಇದೀಗ ಉಪಚುನಾವಣೆ ಮುಗಿದು, ಐದು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಮೈತ್ರಿ ಪಕ್ಷಗಳಿಗೆ ಉತ್ತಮ ಫಲಿತಾಂಶವೂ ಬಂದಿದೆ. ಹೀಗಾಗಿ ಸಂಪುಟ ವಿಸ್ತರಣೆಗೆ ಕೈಹಾಕಿದ್ದ ರಾಜ್ಯ ನಾಯಕರು,ದೆಹಲಿಗೆ ತೆರಳಿ ರಾಹುಲ್ ಜೊತೆ ಚರ್ಚಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನು ಹೈಕಮಾಂಡ್ ನಿಂದ ಯಾವುದೇ ಬುಲಾವ್ ಬಂದಿಲ್ಲ. ಹೀಗಾಗಿ ಒಂದು ಕಡೆ ರಾಜ್ಯ ನಾಯಕರು ಚಡಪಡಿಸುತ್ತಿದ್ದರೆ, ಮತ್ತೊಂದು ಕಡೆ ಆಕಾಂಕ್ಷಿಗಳ ಸಮಾಧಾನವೂ ಮರೆಯಾಗುತ್ತಿದೆ.

ಮಧ್ಯಪ್ರದೇಶ,ರಾಜಸ್ತಾನ,ತೆಲಂಗಾಣ,ಮಿಜೋರಾಂ ಹಾಗೂ ಛತ್ತೀಸ್ ಘಡ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ..ಹೀಗಾಗಿ ಪಂಚ ರಾಜ್ಯಗಳಲ್ಲಿ ಬಿಜೆಪಿಯನ್ನ ಹಿಂದಿಕ್ಕಿ ಅಧಿಕಾರ ಹಿಡಿಯಬೇಕೆಂಬ ನಿಟ್ಟಿನಲ್ಲಿ ಎಐಸಿಸಿ ನಾಯಕರು ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.

ಬಹುತೇಕ ಎಲ್ಲಾ ಹಿರಿಯ ನಾಯಕರು, ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರ ನಡೆಸ್ತಿದ್ದಾರೆ.

ಹೀಗಾಗಿ ರಾಜ್ಯ ನಾಯಕರು ಸಮಯಾವಕಾಶ ಕೇಳಿದರು, ಇನ್ನೂ ದೊರೆಯದ ಸಮಯಾವಕಾಶ ದೊರೆಯುತ್ತಿಲ್ಲವಂತೆ.ಇದರಿಂದ ಹೈಕಮಾಂಡ್ ಜೊತೆ ಚರ್ಚಿಸದೆ ಸಂಪುಟ ವಿಸ್ತರಣೆ ಅಸಾಧ್ಯವೆನ್ನುತ್ತಿದ್ದಾರೆ.

ನವೆಂಬರ್ 15ರ ನಂತರ ಭೇಟಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಒಂದು ವೇಳೆ ಭೇಟಿಗೆ ಅವಕಾಶ ಸಿಕ್ಕರೂ ಎರಡು ವಾರಗಳ ನಂತರವೇ ಸಂಪುಟ ವಿಸ್ತರಣೆಗೆ ಮುಂದಾಗುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಬೈ ಎಲೆಕ್ಷನ್ ಬಳಿಕ ಸಂಪುಟ ವಿಸ್ತರಣೆ ಜೊತೆಗೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಾಗುತ್ತದೆ ಎಂದು ಕನಸು ಕಾಣುತ್ತಿದ್ದ ಸಚಿವಾಕಾಂಕ್ಷಿಗಳಿಗೆ ಮತ್ತಷ್ಟು ನಿರಾಸೆಯಾಗಿದೆ.

Next Story

RELATED STORIES