ಹಾಸನಾಂಬೆ ಹುಂಡಿಯಲ್ಲಿ ನಿಷೇಧಿತ ನೋಟು.. ಪತ್ರಗಳು!

X
TV5 Kannada9 Nov 2018 5:43 AM GMT
ಇತ್ತೀಚೆಗೆ ಮುಕ್ತಾಯಗೊಂಡ ಹಾಸನದ ಹಾಸನಾಂಬೆ ದೇವಸ್ಥಾನದ ಹುಂಡಿಯನ್ನು ಶುಕ್ರವಾರ ತೆರೆಯಲಾಗಿದ್ದು, ಭಕ್ತರು ಹಣದ ಜೊತೆ ಹಾಕಿರುವ ಹಲವಾರು ವಸ್ತುಗಳು, ಪತ್ರಗಳು, ಕುತೂಹಲ ಮೂಡಿಸಿವೆ.
ಹಾಸನಂಬೆಯ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಹಣ, ಚಿನ್ನಾಭರಣ ಹಾಕಿದ್ದಾರೆ. ಅಲ್ಲದೇ ನಿಷೇಧವಾಗಿರುವ ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ದೇವಸ್ಥಾನದ ಹುಂಡಿಯಲ್ಲಿ ಹಲವು ಪತ್ರಗಳು ಕೂಡ ಲಭ್ಯವಾಗಿದ್ದು, ಕವನ ಬರೆದು ಚಿತ್ರ ಬಿಡಿಸಿರುವ ಒಂದು ಕಾಗದ ಪತ್ರ ಹಾಗೂ ಮನೆಯವರ ಉತ್ತಮ ಆರೋಗ್ಯ, ಹಸು-ಕರುಗಳು ಆರೋಗ್ಯ ಕೋರಿಕೆ.. ಹೀಗೆ ನಾನಾ ರೀತಿಯ ಪತ್ರಗಳು ಸಿಕ್ಕಿವೆ.
Next Story