ಎಸಿಪಿಗೆ ಖಡಕ್ ವಾರ್ನಿಂಗ್ ನೀಡಿದ ಅಲೋಕ್ ಕುಮಾರ್

ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರು ವೀಡಿಯೋ ರಿಲೀಸ್ ಆಗಿದ್ದು, ಈ ಬಗ್ಗೆ ಇಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.

ಸಿಸಿಬಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆದಿದ್ದು, ಸಿಸಿಬಿ ಸಿಬ್ಬಂದಿಗಳಿಗೆ ಅಲೋಕ್ ಫುಲ್ ಕ್ಲಾಸ್ ತೆಗೆದುಕೊಂಡರು.ಸತತ ಎರಡು ಗಂಟೆ ಸಭೆ ನಡೆಸಿದ ಅಲೋಕ್ ಕುಮಾರ್, ಎಸಿಪಿ ಮರಿಯಪ್ಪಗೆ ವಾರ್ನಿಂಗ್ ನೀಡಿದರು. ಸಿಸಿಬಿಯಲ್ಲಿ ಶಿಸ್ತು ಮುಖ್ಯ, ಇದೆ ಕೊನೆ ಎಂದು ಮರಿಯಪ್ಪಗೆ ಅಲೋಕ್ ಖಡಕ್ ವಾರ್ನಿಂಗ್ ನೀಡಿದರು.

ಇನ್ನು ಆ್ಯಂಬಿಡೆಂಟ್ ಪ್ರಕರಣದ ಬಗ್ಗೆ ಮಾತನಾಡಿದ ಅಲೋಕ್ ಕುಮಾರ್, ಬಂಧಿತ ಆರೋಪಿ ಫರೀದ್, ರಾಜಕಾರಣಿಗಳ ಜೊತೆ ಲಿಂಕ್ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ. ಎಲ್ಲಾ ಅಯಾಮಗಳಲ್ಲಿ ತನಿಖೆ ಮಾಡ್ತಾ ಇದ್ದೀವಿ. ಮಹಜರು ವಿಡಿಯೋ ಲೀಕ್ ಮಾಡಿದರವ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗತ್ತೆ. ಈ ಬಗ್ಗೆ ಡಿಸಿಪಿಗೆ ಸೂಚನೆ ನೀಡಲಾಗಿದೆ. ತಪ್ಪು ಕಂಡು ಬಂದ್ರೆ ಕ್ರಮ ಜರುಗಿಸ್ತೇವೆ ಎಂದು ಹೇಳಿದ್ದಾರೆ.

ಇನ್ನು ರೆಡ್ಡಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಬಳ್ಳಾರಿಯಲ್ಲೂ ಸಿಸಿಬಿ ಪೊಲೀಸರು ರೆಡ್ಡಿ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕರ್ನಾಟಕದ ಸೇರಿದ್ದಂತೆ ವಿವಿಧ ಕಡೆ ರೆಡ್ಡಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಪ್ರಕರಣ ಸಂಬಂಧ ಪರೀಧ್ ದೋಡ್ಡ ವ್ಯಕ್ತಿಗಳ ಹೆಸರನ್ನ ಬಾಯ್ಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *