ಮಾಜಿ ಪೊಲೀಸ್ ಅಧಿಕಾರಿ ಮನೆಯಿಂದ ವಿದ್ಯಾರ್ಥಿ ನಾಪತ್ತೆ..!

ಮಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಮತ್ತು ರಾಜಕಾರಣಿಯ ಮನೆಯಿಂದ ಅನುಮಾನಾಸ್ಪದವಾಗಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಪಿ‌.ಎಸ್.ಐ ಆಗಿದ್ದ ಮದನ್ ರಾಜೀನಾಮೆ ನೀಡಿ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ರು.

ಈ ವೇಳೆ ಶಕ್ತಿನಗರ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ ಎಂಬಾತ ಪರಿಚಯ ಆಗಿ ಕಳೆದ 7 ತಿಂಗಳಿಂದ ಮದನ್ ಜೊತೆ ಓಡಾಡಿಕೊಂಡು ಅವರ ಮನೆಯಲ್ಲೆ ವಾಸವಿದ್ದ.

ಆದ್ರೆ ಕಳೆದ ತಿಂಗಳು 8ನೇ ತಾರೀಖಿನಿಂದ ವಿನಾಯಕ ನಿಗೂಢವಾಗಿ ನಾಪತ್ತೆಯಾಗಿದ್ದಾನೆ‌‌. ಈ ಬಗ್ಗೆ ವಿನಾಯಕ ಪೋಷಕರಿಗೆ, ಮದನ್ ದಿನಾಂಕ 15 ಕ್ಕೆ ವಿಷಯ ತಿಳಿಸಿದ್ದಾರೆ.

ಇದ್ರಿಂದ ಅನುಮಾನಗೊಂಡ ವಿನಾಯಕನ ಪೊಷಕರಾದ ಶಿವಕುಮಾರ್, ಸಾಕಮ್ಮ ದಂಪತಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗನ ನಾಪತ್ತೆ ಹಿಂದೆ ಮದನ್ ಕೈವಾಡ ಇದೆ ಅಂತಾ ಆರೋಪಿಸಿದ್ದಾರೆ.