ತೆಲಂಗಾಣದಲ್ಲಿ 7 ಕೋಟಿ ರೂ. ಅಕ್ರಮ ಹಣ, ಪಿಸ್ತೂಲು ಪತ್ತೆ

ಡಿಸೆಂಬರ್ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಮತದಾರರಿಗೆ ಆಮೀಷ ಒಡ್ಡಲು ಸಾಗಿಸುತ್ತಿದ್ದ 7.5 ಕೋಟಿ ರೂ. ನಗದು ಹಾಗೂ ಒಂದು ಪಿಸ್ತೂಲನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ನಗರ ಪೊಲೀಸರು ಹಲವಾರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಈ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದು, ಇದನನ್ಉ ಹವಾಲಾ ಮೂಲಕ ಸಾಗಿಸುವ ಯತ್ನ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಶೆಲ್ ಕಂಪನಿಗಳ ಮೂಲಕ ಹಣ ವರ್ಗಾವಣೆ ಆಗಿದ್ದು, ಹವಾಲಾ ಮೂಲಕ ಹಣ ಸಾಗಿಸುತ್ತಿದ್ದರು ಎಂದು ಹೇಳಲಾಗಿದ್ದು, ಈ ಸಂಬಂಧ ನಾಲ್ವರು ಹವಾಲಾ ಏಜೆಂಟರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Recommended For You

Leave a Reply

Your email address will not be published. Required fields are marked *