ಜನಾರ್ದನ ರೆಡ್ಡಿ ಕೇಸ್‌ನಲ್ಲಿ ಎಡವಟ್ಟು ಮಾಡ್ತಾ ಸಿಸಿಬಿ..?

ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿ ಕೇಸ್‌ಗೆ ಸಂಬಂಧಿಸಿದಂತೆ, ಆಂಬಿಡೆಂಟ್ ಕಂಪನಿಯಿಂದ ವಂಚನೆ ಪ್ರಕರಣದ ಬಗ್ಗೆ ಮಹಜರು ಮಾಡಿದ ವೀಡಿಯೋ ಲೀಕ್ ಆಗಿದ್ದು, ಸಿಸಿಬಿ ಪೊಲೀಸರೇ ಈ ವೀಡಿಯೋವನ್ನ ಲೀಕ್ ಮಾಡಿ ಎಡವಟ್ಟು ಮಾಡಿದ್ರಾ ಎಂಬ ಅನುಮಾನ ಮೂಡಿದೆ.

ಆಂಬಿಡೆಂಟ್ ಮಾಲೀಕನನ್ನು ಕರೆದೊಯ್ದು ಪೊಲೀಸರು ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಮಹಜರು ಮಾಡಿದ್ದರು. ಈ ವೇಳೆ ಮಹಜರಿನ ಸಂಪೂರ್ಣ ಚಿತ್ರೀಕರಣ ಮಾಡಿದ್ದು, ಸಾಕ್ಷ್ಯದ ರೂಪದಲ್ಲಿ ವೀಡಿಯೋವನ್ನು ಕೋರ್ಟ್‌ಗೆ ನೀಡಬೇಕಿತ್ತು. ಆದ್ರೆ ಇದೀಗ ವೀಡಿಯೋ ಲೀಕ್ ಆಗಿದೆ.

ಈಗಾಗಲೇ ಜನಾರ್ದನ ರೆಡ್ಡಿ ತಪ್ಪಿಸಿಕೊಳ್ಳಲು ಸಿಸಿಬಿಯಿಂದ ಮಾಹಿತಿ ಲೀಕ್ ಆಗಿದೆ ಎನ್ನೋ ಆರೋಪವಿದ್ದು, ಇದುಕೂಡ ಸಿಸಿಬಿ ಮತ್ತೊಂದು ಎಡವಟ್ಟಾ ಎಂಬ ಪ್ರಶ್ನೆ ಮೂಡಿದೆ.