Top

ಟಿ-20ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಪ್ರಮುಖರಿಗೆ ವಿಶ್ರಾಂತಿ

ಟಿ-20ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಪ್ರಮುಖರಿಗೆ ವಿಶ್ರಾಂತಿ
X

ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಪ್ರಕಟಿಸಲಾದ ಆಸ್ಟ್ರೇಲಿಯಾ ತಂಡದಿಂದ ಪ್ರಮುಖ ಬೌಲರ್​ಗಳಾದ ಮಿಚೆಲ್ ಸ್ಟಾರ್ಕ್​, ನಾಥನ್ ಲಿಯೊನ್ ಹಾಗೂ ಮಿಚೆಲ್ ಮಾರ್ಶ್​ ಅವರನ್ನು ಕೈಬಿಡಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ 1 ಹಾಗೂ ಭಾರತ ವಿರುದ್ಧ ಮೂರು ಟಿ-20 ಪಂದ್ಯಗಳನ್ನು ಭಾರತ ಆಡಲಿದೆ. ಮಾರ್ಕೊಸ್​ ಸ್ಟೊನಿಸಿಸ್ ಮತ್ತು ಜೇಸನ್ ಬೆಹಂಡ್ರೂಫ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಏರಾನ್ ಫಿಂಚ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಯುಎಇನಲ್ಲಿ ನಡೆದ ಟಿ-20 ಹಾಗೂ ಏಕದಿನ ಎರಡೂ ಸರಣಿಗಳಲ್ಲಿ ಸೋಲುಂಡಿತ್ತು. ಅದರಲ್ಲೂ 19 ಏಕದಿನ ಪಂದ್ಯಗಳ ಪೈಕಿ 17ರಲ್ಲಿ ಸೋತಿರುವುದು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ.

ಆಸ್ಟ್ರೇಲಿಯಾ ತಂಡ: ಏರಾನ್ ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ, ಆಸ್ಟನ್ ಅಗರ್, ಜೇಸನ್ ಬೆಹಂಡ್ರೂಫ್, ನಾಥನ್ ಕೌಲ್ಟರ್ ನೀಲ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್​ವೆಲ್, ಬೆನ್ ಮೆಕ್​ಡೆರೊಮೆಟ್, ಆರ್ಚಿ ಶಾರ್ಟ್​, ಬಿಲ್ಲಿ ಸ್ಟಾನ್​ಲೇಕ್, ಮಾರ್ಕೊಸ್​ ಸ್ಟೋನಿಸಿಸ್, ಆ್ಯಂಡ್ರ್ಯು ಟೈ, ಆ್ಯಡಂ ಜಾಂಪ.

Next Story

RELATED STORIES