ದೇಶವನ್ನ ಉಳಿಸುವತ್ತ ಮೊದಲು ನಮ್ಮ ಗಮನ- ನಾಯ್ಡು

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಚಂದ್ರಬಾಬು ನಾಯ್ಡು ಸಭೆ ನಡೆಸಿದ್ದು, ಹಲವು ಮಹತ್ವದ ಚರ್ಚೆ ನಡೆದಿದೆ.

ಸಭೆ ಬಳಿಕ ಚಂದ್ರಬಾಬು ನಾಯ್ಡು ಮಾತನಾಡಿದ್ದು, ದೇವೇಗೌಡರು ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಒಂದಾಗಿದ್ದೇವೆ. ದೇವೇಗೌಡ, ಸಿಎಂ ಕುಮಾರಸ್ವಾಮಿ ಕೂಡ ಜೊತೆಯಾಗಿದ್ದಾರೆ ಎಂದು ಹೇಳಿದರು.

ಅಲ್ಲದೇ ಕೇಂದ್ರ ಸರ್ಕಾರ ಅಟೋನಮಸ್ ಬಾಡಿಗಳನ್ನ ದುರ್ಬಳಕೆ ಮಾಡಿಕೊಳ್ತಿದೆ. ಐಟಿ,ಇಡಿ,ಸಿಬಿಐ ಗಳನ್ನ ಕೇಂದ್ರ ಕಂಟ್ರೋಲ್ ಮಾಡುತ್ತಿದೆ. ಕರ್ನಾಟಕ, ತೆಲಂಗಾಣ, ಬಿಹಾರ, ತಮಿಳುಮಾಡು, ಗುಜರಾತ್ ಗಳಲ್ಲಿ ಹೆರಾಸ್‌ಮೆಂಟ್ ಮಾಡುತ್ತಿದೆ. ವಿರೋಧ ಪಕ್ಷಗಳನ್ನ ಹಣಿಯುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ನೋಟ್‌ ಬ್ಯಾನ್ ಬಗ್ಗೆಯೂ ಚಂದ್ರಬಾಬು ನಾಯ್ಡು ಮಾತನಾಡಿದ್ದು, ರಫೇಲ್ ಹಗರಣದ ಬಗ್ಗೆ ಪ್ರಧಾನಿ ಮಾತನಾಡುತ್ತಿಲ್ಲ. ನೋಟ್ ಬ್ಯಾನ್ ಮಾಡಿ ಎರಡು ವರ್ಷ ಆಯ್ತು. ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಪದೇ ಪದೇ ಪೆಟ್ರೋಲ್ ಬೆಲೆ ಏರುತ್ತಲೇ ಇದೆ. ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಅಲ್ಪಸಂಖ್ಯಾತರಿಗೆ ರಕ್ಷಣೆಯೇ ಇಲ್ಲ,ಭದ್ರತೆಯೂ ಇಲ್ಲದಂತಾಗಿದೆ. ಅವರಿಗೆ ಅಭದ್ರತೆ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರವನ್ನ ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ತೃತೀಯ ರಂಗಕ್ಕೆ ಮುಂದಾಗಿದ್ದೇವೆ. ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಾವು ಚರ್ಚಿಸಿಲ್ಲ. ಆದರೆ ದೇಶವನ್ನ ಉಳಿಸುವತ್ತ ಮೊದಲು ನಮ್ಮ ಗಮನ ಎಂದಿದ್ದಾರೆ.

ಇನ್ನು ಮಹಾಘಟಬಂಧನ ವಿಫಲ ಎಂಬ ಬಿಜೆಪಿ ಆರೋಪಕ್ಕೆ ಕರ್ನಾಟಕದ ಬೈ ಎಲೆಕ್ಷನ್ ಎಲ್ಲಕ್ಕೂ ಉತ್ತರ ನೀಡಿದೆ. ಮಾಯಾವತಿ ಎಲ್ಲೂ ಹೊರಗೆ ಹೋಗಿಲ್ಲ.ಅವರ ಜೊತೆಯೂ ನಾನು ಚರ್ಚಿಸಿದ್ದೇನೆ. ನಾವೆಲ್ಲರೂ ಒಟ್ಟಾಗಿಯೇ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ನಾವೆಲ್ಲರೂ ಒಟ್ಟಾಗಿಯೇ ಕೆಲಸ ಮಾಡುತ್ತೇವೆ ಜಾತ್ಯಾತೀತ ಮನಸ್ಥಿತಿಯ ಪಕ್ಷಗಳೆಲ್ಲ ಒಟ್ಟಾಗಿದ್ದೇವೆ ಎಂದು ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *