Top

ರೆಡ್ಡಿ ಪ್ರಕರಣದ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು..?

ರೆಡ್ಡಿ ಪ್ರಕರಣದ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು..?
X

ಮಂಗಳೂರು: ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ತನಗೇನು ಗೊತ್ತಿಲ್ಲವೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಎಸ್‌ವೈ, ಈ ಬಗ್ಗೆ ನನಗೇನು ಅಂದಾಜಿಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೋ, ತೆಗೆದುಕೊಳ್ಳಲಿ. ಇದರ ಬಗ್ಗೆ ನಮಗೇನು ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಅಷ್ಟಕ್ಕೂ ಜನಾರ್ದನ ರೆಡ್ಡಿ ಈಗ ನಮ್ಮ ಪಕ್ಷದಲ್ಲಿಲ್ಲ. ಈ ಬಗ್ಗೆ ತನಿಖೆ ಆಗ್ಲಿ. ತಪ್ಪು ಯಾರು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಈ ಬಗ್ಗೆ ನಾನು ಹೆಚ್ಚಿನ ಮಾಹಿತಿ ಪಡೆದಿಲ್ಲ. ಕಾನೂನು ಏನು ಹೇಳುತ್ತೋ ಹಾಗೆ ಆಗುತ್ತೆ. ವಿರೋಧ ಪಕ್ಷದವರ ಕೈವಾಡ ಅಂತಾ ಹೇಳೊಕೆ ನಾನು ಹೆಚ್ಚಿನ ಮಾಹಿತಿ ಪಡೆದಿಲ್ಲ. ಮಾದ್ಯಮದಲ್ಲಿ ನೋಡಿ ಗೊತ್ತಾಗಿದೆ ಅಷ್ಟೆ ಎಂದು ಹೇಳಿದ್ದಾರೆ.

Next Story

RELATED STORIES