Top

ಮೋದಿ ಆಡಳಿತ ಹಿಟ್ಲರ್ ದೊಡ್ಡಪ್ಪನ ಹಾಗೆ: ವಿನಯ್ ಕುಲಕರ್ಣಿ

ಮೋದಿ ಆಡಳಿತ ಹಿಟ್ಲರ್ ದೊಡ್ಡಪ್ಪನ ಹಾಗೆ: ವಿನಯ್ ಕುಲಕರ್ಣಿ
X

ಮೋದಿ ದೇಶದಲ್ಲಿ ಹಿಟ್ಲರ್ ದೊಡ್ಡಪ್ಪನ ಹಾಗೆ ಆಡಳಿತ ನಡೆಸುತ್ತಿದ್ದಾರೆ ಎಂದು ಧಾರವಾಡ ಮಾಜಿ ಸಚಿವ ವಿನಯ್ ಕುಲಕರ್ಣಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ನಗರದ ವಿನಯ್ ಡೈರಿಯಲ್ಲಿ ಹುಟ್ಟುಹಬ್ಬದ ಸಂಭ್ರಮದ ಕಾರ್ಯಕ್ರಮದ ಬಳಿಕ ಟಿವಿ5 ಜೊತೆ ಮಾತನಾಡಿದ ಅವರು, ರೆಡ್ಡಿ ಬಂಧನ ಭೀತಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಬಿಜೆಪಿ ಪಕ್ಷದಲ್ಲಿ ಇಂತಹವೂ ಬಹಳ ಆಗಿದೆ. ರೆಡ್ಡಿಯವರು ಪಾಪ ಬಹಳ ಅವಘಡ ಮಾಡಿಕೊಂಡಿದ್ದರು. ಕೇಂದ್ರ ಸರ್ಕಾರ ಇಷ್ಟು ದಿನ ಸಿಬಿಐ, ಐಟಿಗಳನ್ನ ತಮ್ಮ ಸ್ವಂತ ಮನೆ ಡಿಪಾರ್ಟ್ಮೆಂಟ್ ಗಳಾಗಿ ಬಳಸಿಕೊಂಡಿದೆ. ಇದೀಗ ಅವರಿಗೆ ಅದು ತೀರುಗೇಟಾಗಿದೆ. ಚುನಾವಣೆ ಸಮಯದಲ್ಲಿ ಸಿಬಿಐ, ಐಟಿ ರೆಡ್ ಮಾಡಿಸಿದ್ದರು ಎಂದರು.

ಮೆಂಟಲ್ ಹೆರಾಶ್ಮೆಂಟ್ ಮಾಡಿದ್ದಾರೆ. ಬಿಜೆಪಿಯವರ ಮನೆಯ ಮೇಲೆ ರೆಡ್ ಮಾಡಿಲ್ಲ. ಬಿಜೆಪಿಯವರು ಯಾರು ಶ್ರೀಮಂತರಿಲ್ವಾ? ಬಿಜೆಪಿಯವರು ಬಿಪಿಎಲ್ ಕಾರ್ಡ್ ಹೊಂದಿದ್ದಾರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಕುಲಕರ್ಣಿ ವಾಗ್ದಾಳಿ ನಡೆಸಿದರು.

ಇದೇ ಈ ವೇಳೆ ಹಿಂದೆ ಮೋದಿ ಅಲೆಯಿಂದ ಧಾರವಾಡ ಸಂಸದ ಪ್ರಲ್ಲಾದ ಜೋಶಿ ಗೆದ್ದಿದ್ದರು. ಆದರೆ ಇದೀಗ ಮೋದಿ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಧಾರವಾಡದಲ್ಲಿ ಮೋದಿಯ ಅಲೆ ಇಲ್ಲ. ಮೈತ್ರಿ ಸರ್ಕಾರದ ಮೂಲಕ ಚುನಾವಣೆ ಎದುರಿಸುತ್ತೇವೆ. ಪಕ್ಷದ ನಿರ್ಣಯ, ಹಿರಿಯರು ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ.

ಯಾರಿಗೆ ಟಿಕೆಟ್ ಕೊಟ್ಟರು ಖುಷಿಯಿದೆ. ಕಳೆದ ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಅವರು ನಿಲ್ಲು ಅಂದಿದ್ದರು. ಅದಕ್ಕೆ ಸ್ಪರ್ಧೆ ಮಾಡಿದ್ದೆ, ಅಲ್ಲದೇ 4 ಲಕ್ಷ ಮತ ಕೂಡ ಪಡೆದಿದ್ದೆ. ಮೋದಿ ಗಾಳಿಯಲ್ಲಿಯೇ ದೊಡ್ಡ ಫೈಟ್ ಕೊಟ್ಟಿದ್ದೆ. ಇಗ ಮೋದಿ ಏನು ಅನ್ನೋದು ಇವತ್ತು ಎಲ್ಲರಿಗೂ ಗೊತ್ತಾಗಿದೆ.

ಮೋದಿ ಒಬ್ಬ ಸುಳ್ಳಿನ ಸರದಾರ. ಪ್ರಲ್ಲಾದ ಜೋಶಿ ಅವರು ಯಾವಾಗಲೂ ಯಾರದರೂ ಅಲೆಯಲ್ಲಿ ಗೆದ್ದವರು. ವಾಜಪೇಯಿ, ಯಡಿಯೂರಪ್ಪ, ಮೋದಿ ಅಲೆಯಲ್ಲಿ ಗೆದ್ದವರು. ವ್ಯಯಕ್ತಿಕವಾಗಿ ಅವರು ಗೆಲುವು ಸಾಧಿಸಿಲ್ಲ ಎಂದು ಕುಹಕವಾಡಿದರು. ಉಪ ಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ 100% ದಿಕ್ಸೂಚಿ. ಜನರಿಗೆ ಬಿಜೆಪಿಯವರ ಪರಿಸ್ಥಿತಿ ಏನು ಅನ್ನೊದು ಗೊತ್ತಾಗಿದೆ ವ್ಯಂಗ್ಯವಾಡಿದರು.

Next Story

RELATED STORIES