Top

ಟಿಪ್ಪು ಜಯಂತಿ ರಾಷ್ಟ್ರೀಯ ಹಬ್ಬವಾಗಬೇಕು:ವಾಟಾಳ್​ ನಾಗರಾಜ್

ಟಿಪ್ಪು ಜಯಂತಿ ರಾಷ್ಟ್ರೀಯ ಹಬ್ಬವಾಗಬೇಕು:ವಾಟಾಳ್​ ನಾಗರಾಜ್
X

ಟಿಪ್ಪು ಜಯಂತಿ ಆಚರಣೆ ಸದ್ಯ ರಾಜ್ಯದಲ್ಲಿ ಚರ್ಚಿತವಾಗ್ತಿರೋ ವಿಷಯ. ಬಿಜೆಪಿಯ ಸಾಕಷ್ಟು ವಿರೋಧದ ಮಧ್ಯೆಯೂ ದೋಸ್ತಿ ಸರ್ಕಾರ ಟಿಪ್ಪು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಪ್ಲಾನ್​ ಮಾಡಿಕೊಂಡಿದೆ. ಇತ್ತ ಕನ್ನಡಪರ ವಿನೂತನ ಹೋರಾಟಗಾರ ವಾಟಾಳ್​ ನಾಗರಾಜ್​ ಕೂಡ ಟಿಪ್ಪು ಜಯಂತಿ ಪರ ಮಾತನಾಡಿದ್ದಾರೆ.

ಬೆಂಗಳೂರು ನಗರದ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಟಿಪ್ಪು ಒಬ್ಬ ಅಪ್ರತಿಮ‌ ಹೋರಾಟಗಾರ. ದೇಶಕ್ಕಾಗಿ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟಿದ್ದ. ಹೀಗಾಗಿ ನಾವು ಅವರ ಜಯಂತಿಯನ್ನು ಮಾಡೇ ಮಾಡ್ತೀವಿ. ಇದೇ 10 ರಂದು ದೇವನಹಳ್ಳಿ ಯಲ್ಲಿ ಹಾಗೂ 20ರಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಿಸಲಿದ್ದೇವೆ ಎಂದರು.

ಜೊತೆಗೆ ಟಿಪ್ಪು ಜಯಂತಿ ರಾಷ್ಟ್ರೀಯ ಹಬ್ಬವಾಗಬೇಕು. ದೆಹಲಿಯ ಸಂಸತ್ ಮುಂದೆ ಟಿಪ್ಪು ಪ್ರತಿಮೆ ಸ್ಥಾಪಿಸಬೇಕು ಅಂತಾ ಒತ್ತಾಯಿಸಿದರು.

ಇನ್ನು ಇದೇ ಸಂದರ್ಭ ಇದೇ 12 ರಮದು ಕನ್ನಡ ಚಳುವಳಿಯನ್ನು ತೀವ್ರವಾಗಿ ನಡೆಸಲು ತೀರ್ಮಾನಿಸಿದ್ದಾಗಿ ಹೇಳಿದರು. ಕನ್ನಡದ ಪರಿಸ್ಥಿತಿ ಬೇಮಗಳೂರಿನಲ್ಲಿ ಹೀನಾಯವಾಗಿದೆ ಎಂದರು. ಇನ್ನೂ ಚಿತ್ರರಂಗದ ಕುರಿತು ಮಾತನಾಡಿದ ಅವರು ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆ ಇದೆ. ತಮಿಳು ತೆಲುಗು ಚಿತ್ರ ಮಂದಿರಗಳತ್ತ ಜನಾ ಮುಖಾ ಮಾಡ್ತಿದ್ದು ಅದು ಅಪಾಯಕಾರಿ ಎಂದರು.

ಇನ್ನೂ ರಜನೀಕಾಂತ್​ ಕಮಲ್​ ಹಾಸನ್​ ಬಗ್ಗೆ ಮಾತನಾಡಿದ ಅವರು ಇವರಿಬ್ಬರಿಗೂ ಕಾವೇರಿ ಬಗ್ಗೆ ಮಾತನಾಡುವುದಷ್ಟೇ ಕೆಲಸವಾಗಿದೆ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ರಜನೀಕಾಂತ್​ 2.0 ಸಿನಿಮಾ ಬಿಡುಗಡೆಯಾಗಬಾರ್ದು ಎಂದು ಒತ್ತಾಯಿಸಿದರು.

ಒಂದ್ಕಡೆ ಅನ್ಯ ಭಾಷೆಗಳ ಹಾವಳಿ ಬಗ್ಗೆ ವಾಟಾಳ್​ ನಾಗರಾಜ್​ ಹರಿಹಾಯ್ದ್ರೆ ಇತ್ತ ಟಿಪ್ಪು ಜಯಂತಿಯನ್ನಾ ವಿಜೃಂಭಣೆಯಿಂದ ಆಚರಿಸೋದಾಗಿ ಹೇಳಿದರು.

Next Story

RELATED STORIES