Top

ಬಿಜೆಪಿ ಆಪರೇಷನ್‌ ಕಮಲದ ರಹಸ್ಯ ಬಿಚ್ಚಿಟ್ಟ ಟಿ. ಡಿ ರಾಜೇಗೌಡ

ಬಿಜೆಪಿ ಆಪರೇಷನ್‌ ಕಮಲದ ರಹಸ್ಯ ಬಿಚ್ಚಿಟ್ಟ ಟಿ. ಡಿ ರಾಜೇಗೌಡ
X

ಬಿಜೆಪಿ ಆಪರೇಷನ್‌ ಕಮಲದ ರಹಸ್ಯ ವನ್ನ ಮೈತ್ರಿ ಸರ್ಕಾರದ ಶಾಸಕರೊಬ್ಬರು ಬಹಿರಂಗ ಪಡಿಸಿದ್ದಾರೆ. ತಮ್ಮ ಸಂಬಂಧಿಕರ ಮೂಲಕ ಬಿಜೆಪಿಗೆ ಸೆಳೆಯೊ ಪ್ರಯತ್ನವನ್ನು ಬಿಜೆಪಿ ಪಕ್ಷದವರು ಮಾಡಿದರು ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಹೇಳಿದರು.

ಹಾಸನಾಂಬ ದೇವಿಯ ದರ್ಶನ ಪಡೆದು ಮಾತನಾಡಿದ ಶಾಸಕ ಟಿ.ಡಿ ರಾಜೇಗೌಡ, ನಮ್ಮ ಸಬಂಧಿಕರು ಮತ್ತು ನಾರ್ವೆ ಸೋಮಶೇಖರ ಮೂಲಕ ಪಕ್ಷಕ್ಕೆ ಸೆಳೆಯೋ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದರು ಎಂದು ಆರೋಪಿಸಿದ್ದಾರೆ.

ಐವತ್ತು ಕೋಟಿ ಜೊತೆಗೆ ಮಂತ್ರಿಸ್ಥಾನ ಅಥವಾ ನೂರು ಕೋಟಿ ನೀಡೋದಾಗಿ ಆಫರ್ ನೀಡಿದ್ದರೆಂದು ರಾಜೇಗೌಡ ಹೇಳಿದರು. ನಾನು ಪಕ್ಷ ನಿಷ್ಟವಂತ ಕಾರ್ಯಕರ್ತ. ಹಾಗಾಗಿ ಅವರ ಯಾವುದೇ ಆಮಿಷಕ್ಕೆ ಬಲಿಯಾಗಲಿಲ್ಲ ಎಂದರು.

ಸರ್ಕಾರ ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡಲು ಕನಿಷ್ಟ ಒಂದು ವರ್ಷ ಅವಕಾಶ ಬೇಕು. ಐದು ವರ್ಷ ಅವಕಾಶ ಸಿಕ್ಕರೆ ರಾಜ್ಯದಲ್ಲಿ ಉತ್ತಮ‌ ಪ್ರಗತಿಯಾಗಲಿದೆ. ಸುಮ್ಮನೇ ಬಿಜೆಪಿ ಅಭಿವೃಧ್ಥಿಯಾಗಿಲ್ಲ ಎಂದು ಹೇಳುವುದು ಬೇಡ ಎಂದು ಬಿಜೆಪಿ ಪಕ್ಷದವರ ಮೇಲೆ ಕಿಡಕಾರಿದರು.

ನೆನ್ನೆಯಷ್ಟೇ ಪಿರಿಯಾಪಟ್ಟಣದ ಹಾಗು ಶಿರಾ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದ ಬಗ್ಗೆ ಸಿಎಂ ಹೇಳಿಕೆ ಬೆನ್ನಲ್ಲೇ ಮತ್ತೊಂದು ಬಿಜೆಪಿ ಆಪರೇಷನ್ ಬೆಳಕಿಗೆ ಬಂದಿದೆ.

Next Story

RELATED STORIES