ಗಲ್ಲಾ ಪೆಟ್ಟಿಗೆಯಲ್ಲಿ ಶರಣ್ ವಿಕ್ಟರಿ-02 ಅಬ್ಬರ

ಈ ವಾರ ತೆರೆಕಂಡ ಕಾಮಿಡಿ ಅಧ್ಯಕ್ಷ ಶರಣ್ ಅಭಿನಯದ ವಿಕ್ಟರಿ-2 ಹೌಸ್ ಪ್ರದರ್ಶನ ಕಾಣುತ್ತಿದೆ. ಮೊದಲನೇ ವಾರ ಸಕ್ಸಸ್ ಫುಲ್​ ಆಗಿ ಪ್ರದರ್ಶನ ಕಾಣ್ತಿರುವ ವಿಕ್ಟರಿ-02 ಜೋಳಿಗೆ ಕೂಡ ಫುಲ್ ಆಗಿದೆ.

ಪ್ರೇಕ್ಷಕರ ಮೆಚ್ಚುಗೆಯಿಂದ ಎರಡನೇ ವಾರದತ್ತ ಕಾಮಿಡಿ ಕಚಗುಳಿ ಇಡ್ತಿರುವ ವಿಕ್ಟರಿ 2 ಪಯಣ ಸಾಗಿದ್ದು ಮೊದಲ ವಾರದ ಕಲೆಕ್ಷನ್ ಕೇಳಿದರೆ  ನೀವು ಅಚ್ಚರಿ ಪಡೊದು ಗ್ಯಾರಂಟಿ. ಯಾಕಂದ್ರೆ ವಿಕ್ಟರಿ-2 ಬಾಕ್ಸ್ ಆಪೀಸ್ ಕಲೆಕ್ಷನ್ ಹತ್ತು ಕೋಟಿ ದಾಟಿದೆ.

ಮೊದಲನೇ ವಾರ ಪ್ರೇಕ್ಷಕರಿಂದ ಸಿಕ್ಕ ಪ್ರೀತಿಗೆ ವಿಕ್ಟರಿ-2 ಟೀಂ ಫುಲ್ ಖುಷ್ ಆಗಿದ್ದು, ಕಲೆಕ್ಷನ್ ವಿಚಾರದಲ್ಲಿ ವಿಕ್ಟರಿ ಬರೆದಿರೋದು ಇಡೀ ಚಿತ್ರತಂಡಕ್ಕೆ ಇನ್ನಿಲ್ಲದ ಖುಷಿ ತಂದಿದೆ. ನಿರ್ಮಾಪಕ ತರೂಣ್ ಶಿವಪ್ಪ ಮುಖದಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆದಷ್ಟೇ ಖುಷಿ ತಂದಿದೆ.

ವಿಕ್ಟರಿ-2 ಔಟ್ ಎಂಡ್ ಔಟ್ ಕಾಮಿಡಿ ಸಿನಿಮಾ. ಶರಣ್, ಸಾಧುಕೋಕಿಲ, ಕಾಮಿಡಿ ಟಾನಿಕ್ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸೋವಷ್ಟು ನಗಿಸುತ್ತೆ.ಇನ್ನು ಹಾಡುಗಳು ಕೂಡ ಚಿ ತ್ರಕ್ಕೆ ಪ್ಲಸ್ ಪಾಯಿಂಟ್. ಇನ್ನೊಂದು ಕಡೆ ಸ್ಟಾರ್ ನಟರ ಯಾವ ಸಿನಿಮಾಗಳು ರಿಲೀಸ್ ಆಗ್ದೆ ಇರೋದು ಬೇರೆ ಸಿನಿಮಾಗಳು ತೆರೆಗೆ ಬರ್ದೇ ಇರೋದು ವಿಕ್ಟರಿ-2 ವಿಕ್ಟರಿಗೆ ಪ್ರಮುಖ ಕಾರಣ.

ಒಟ್ಟಿನಲ್ಲಿ.ಚಿತ್ರಮಂದಿರದಲ್ಲಿ ಶರಣ್ ಓಟಾ ಜೋರಾಗಿದ್ದು, ದಾಖಲೆಯ ಕಲೆಕ್ಷನ್​ನತ್ತ ಮುನ್ನುಗ್ಗುತ್ತಿದೆ. ಎರಡನೇ ವಾರದತ್ತ ಯಶ್ಸವಿಯಾಗಿ ಮುನ್ನುಗ್ಗುತ್ತಿರುವ ವಿಕ್ಟರಿ-2 ಖಾತೆಯಲ್ಲಿ ಇನ್ನೆಷ್ಟು ಕೋಟಿ ಕಲೆಕ್ಷನ್ ಆಗತ್ತೋ ಕಾದುನೋಡಬೇಕು.