ರಾಮನ ಪ್ರತಿಮೆ ಆಕರ್ಷಣೀಯ ಕೇಂದ್ರಬಿಂದುವಾಗಲಿದೆ- ಯೋಗಿ

ಲಖನೌ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು.

ಈ ವೇಳೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುವುದರ ಜೊತೆಗೆ, ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಖಚಿತವೆಂದು ಹೇಳಿದ್ದ ಯೋಗಿ, ಇದೀಗ ಶ್ರೀರಾಮನ ಪ್ರತಿಮೆ ಕೂಡ ಪ್ರವಾಸಿಗರ ಆಕರ್ಷಣೀಯ ಕೇಂದ್ರಬಿಂದುವಾಗಲಿದೆ ಎಂದು ಹೇಳಿದ್ದಾರೆ.

ಅಲ್ಲದೇ ರಾಮಮಂದಿರದ ದ್ವಾರದಲ್ಲೇ ರಾಮನ ಪ್ರತಿಮೆ ನಿರ್ಮಾಣವಾಗಲಿದ್ದು,ಗುಜರಾತ್‌ನಲ್ಲಿರುವ ಸರ್ದಾರ್ ಪಟೇಲರ ಮೂರ್ತಿಯಂತೆ ದೊಡ್ಡ ಯೋಜನೆಯಾಗಲಿದೆಯಂತೆ.

ಉತ್ತರಪ್ರದೇಶ ಸರ್ಕಾರ ಕಳೆದ ವರ್ಷವೇ ರಾಮಮಂದಿರ ಜೊತೆಗೆ ರಾಮನ ಪ್ರತಿಮೆ ನಿರ್ಮಾಣದ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಈವರೆಗೂ ಯಾವುದೇ ತಯಾರಿ ನಡೆದಿರಲಿಲ್ಲ.ಆದರೆ ಯೋಗಿ ಆದಿತ್ಯನಾಥ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತೆ ಘೋಷಣೆ ಮಾಡಿದ್ದಾರೆ.

Recommended For You

Leave a Reply

Your email address will not be published. Required fields are marked *