ಪುನೀತ್ ರಾಜ್​ಕುಮಾರ್ ನಿವಾಸದಲ್ಲಿ ಹೇಗಿದೆ ಗೊತ್ತಾ ಬೆಳಕಿನ ಹಬ್ಬ..?!

ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಪ್ರಿಯವಾದ ಹಬ್ಬ ದೀಪಾವಳಿ. ಇನ್ನೂ ಚಿತ್ರರಂಗದ ನಟ-ನಟಿಯರ​ ಹೇಗೆ ಬೆಳಕಿನ ಹಬ್ಬವನ್ನ ಆಚರಿಸ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರತ್ತೆ. ಡಾ. ರಾಜ್​ಕುಮಾರ್​ ಕಾಲದಿಂದಲೂ ದೊಡ್ಮನೆಯಲ್ಲಿ ಹಬ್ಬದ ಸಂಭ್ರಮ ಬಲುಜೋರಗಿದೆ.

ಈ ವರ್ಷ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿವಾಸದಲ್ಲಿ ದೀಪಾವಳಿಯ ಸಡಗರ ಜೋರಾಗಿದೆ. ಸ್ನೇಹಿತರು, ಸಂಬಂಧಿಕರೆಲ್ಲ ಪುಣಿತ್ ಮನೆಯಲ್ಲಿ ಸೇರಿ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಆ ಸಂತಸದ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣ, ಧೀರೇನ್ ರಾಮ್​ ಕುಮಾರ್, ದ್ಯಾನಿಶ್ ಸೇಠ್​ ಸೇರಿದಂತೆ ಅಪ್ಪು ಫ್ರೆಂಡ್ಸ್, ರಿಲೇಟಿವ್ಸ್​ ಹಬ್ಬದ ಸಡಗರದಲ್ಲಿ ಭಾಗಿಯಾಗಿದ್ದಾರೆ.  ಪುನೀತ್ ರಾಜ್​ಕುಮಾರ್​, ಪವನ್ ಒಡೆಯರ್​ ಕಾಂಬಿನೇಷನ್​​ನ ನಟಸಾರ್ವಭೌಮ ಪೋಸ್ಟರ್ಸ್​​ ಹಬ್ಬದ ಸಂಭ್ರಮವನ್ನ ಇಮ್ಮಡಿಗೊಳಿಸಿದೆ..

ನಟಸಾರ್ವಭೌಮ ಸಿನಿಮಾ ನಿರ್ದೇಶಕ ಪವನ್​ ಒಡೆಯರ್​ ಮತ್ತು ಅಪೇಕ್ಷಾ ಪುರೋಹಿತ್ ದಂಪತಿಗೆ ಮೊದಲನೇ ದೀಪಾವಳಿ ಹಬ್ಬದ ಸಂಭ್ರಮ. ಚಿರಂಜೀವಿ ಸರ್ಜಾ, ಮೇಘನಾ ರಾಜ್​ ಕೂಡ ಮದುವೆ ನಂತ್ರ ಮೊದಲ ಬಾರಿಗೆ ದೀಪಾವಳಿ ಹಬ್ಬ ಆಚರಿಸ್ತಿದ್ದಾರೆ. ರಘು ಮುಖರ್ಜಿ ಮತ್ತು ಅನುಪ್ರಭಾಕರ್ ದಂಪತಿ ಮುದ್ದಾದ ಕಂದನ ಜೊತೆ ಹಬ್ಬ ಸಂಭ್ರಮವನ್ನ ಬರಮಾಡಿಕೊಂಡಿದ್ದಾರೆ.

ಕೆಲವರು ವಿದೇಶದಲ್ಲಿ ದೀಪಾವಳಿ ಹಬ್ಬ ಆಚರಿಸಿದರೆ ಮತ್ತೆ ಕೆಲವರು ಮನೆಯಲ್ಲೇ ಹಬ್ಬವನ್ನ ಆಚರಿಸ್ತಿದ್ದಾರೆ. ಈ ಬಾರಿ ಪಟಾಕಿ ಸದ್ದು ಕಡಿಮೆಯಾಗಿ ಎಲ್ಲೆಲ್ಲೂ ದೀಪಗಳನ್ನ ಬೆಳಗಿ ಹಬ್ಬ ಆಚರಿಸಲಾಗ್ತಿದೆ. ಹೊಸ ಸಿನಿಮಾಗಳ ಪೋಸ್ಟರ್​ಗಳು ಈ ಬಾಗಿ ಹಬ್ಬಕ್ಕೆ ಮತ್ತಷ್ಟು ರಂಗುತುಂಬಿವೆ.