ಅರೆಸ್ಟ್ ಆಗ್ತಾರಾ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ..?

ಕಳೆದ ವಿಧಾಸಭಾ ಚುನಾವಣೆಯಲ್ಲಿ ಗಾಲಿ ಜನಾರ್ಧನರಡ್ಡಿ 20 ಕೋಟಿ ರೂಪಾಯಿ ಅಕ್ರಮವಾಗಿ ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸ್ ರೆಡ್ಡಿ ಬಂಧನಕ್ಕೆ ಸಜ್ಜಾಗಿದೆ.

ಈಗಾಗಲೇ ಬಂಧನ ಸುಳಿವು ಅರಿತ ಗಾಲಿ ಜನಾರ್ಧನರೆಡ್ಡಿ ಯಾರ ಕಣ್ಣಿಗೂ ಕಾಣದಂತೆ ಕಣ್ಮರೆಯಾಗಿದ್ದಾರೆ ಎಂದು ಗೊತ್ತಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್, ಬಂಗಾರ ಅಂಗಡಿ ಮಾಲೀಕ ರಮೇಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಅಂಬಿಡೆಂಟ್ ಕಂಪನಿ ಚೀಟಿಂಗ್ ಕಂಪನಿ ಆಗಿದ್ದು ನೂರಾರು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು ಕೋಟ್ಯಾಂತರ ರೂಪಾಯಿ ವಂಚನೆ ಆಗಿದೆ ಎಂಬ ಪ್ರಕರಣದ ತನಿಖೆ ನಡೆಸಿದಾಗ ಈ ಅಂಶ ಬಯಲಿಗೆ ಬಂದಿದೆ.

ಆ ಪ್ರಕರಣ ಮುಚ್ಚಿ ಹಾಕಲು ಇಡಿ ಅಧಿಕಾರಿಗಳಿಗೆ ಗಾಲಿ ಜನಾರ್ಧನರೆಡ್ಡಿ ಒಂದು ಕೋಟಿ ನೀಡಿದ್ದರು. ಅದೇ ಆಧಾರದ ಮೇಲೆ ಇಡಿ ಅಧಿಕಾರಿಗಳನ್ನು ಹ್ಯಾಂಡಲ್ ಮಾಡುವುದಾಗಿ ಹೇಳಿಕೊಂಡಿದ್ದರು.

ಆದರೆ ಬೆಂಗಳೂರು ಸಿಸಿಬಿ ಪೊಲೀಸ್ ಅದರಲ್ಲೂ ವಿಶೇಷವಾಗಿ ಅಲೋಕಕುಮಾರ್ ರೆಡ್ಡಿ ಒತ್ತಡಕ್ಕೆ ಮಣಿಯದೆ ಬಂಧನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಂಧನ ಭೀತಿಯಿಂದ ರಡ್ಡಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.