ಕನ್ನಡದ ಭಜರಂಗಿ ಭಾಯಿಜಾನ್ ಡಿ ಬಾಸ್ ರಾಬರ್ಟ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುಂಬಿ ತರುಣ್​ ಸುಧೀರ್ ಕ್ರೇಜಿ ಕಾಂಬಿನೇಷನ್​​ ಸಿನಿಮಾ ಥೀಮ್ ಪೋಸ್ಟರ್ ರಿವೀಲ್​ ಆಗಿದೆ. ಸಿಂಗಲ್ ಪೋಸ್ಟರ್ ಹತ್ತಾರು ಕಥೆಗಳನ್ನ ಹೇಳುವಂತಿದ್ದು, ಬಾಲಿವುಡ್​​ ಸೂಪರ್ ಹಿಟ್ ಭಜರಂಗಿ ಭಾಯಿಜಾನ್ ಸಿನಿಮಾವನ್ನ ನೆನಪಿಸ್ತಿದೆ.

ಬಾಕ್ಸಾಫೀಸ್​ ಸುಲ್ತಾನ್​​ ದಾಸ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ D53. ಟೈಟಲ್​ ಫೈನಲ್ ಮಾಡೋಕು ಮೊದ್ಲೆ ಥೀಮ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಕೆರಳುವಂತೆ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಪೋಸ್ಟರ್​​ನಲ್ಲಿ ಕಥೆಯ ಎಳೆ ಏನಿರಬಹುದು ಅನ್ನೋ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಸ್ಕೆಚ್​​ ಬಳಸಿ ಸಿನಿಮಾ ಪೋಸ್ಟರ್​ ಮಾಡಲಾಗಿದೆ. ಈ ಲುಕ್​ನಲ್ಲಿ ದರ್ಶನ್​ ತನ್ನ ರಕ್ತಸಿಕ್ತ ಬಲಗೈನಲ್ಲಿ ಪುಟ್ಟ ಮಗುವಿನ ಕೈಯೊಂದನ್ನು ಹಿಡಿದುಕೊಂಡಿದ್ದಾರೆ. ಹಿನ್ನೆಲೆಯಲ್ಲಿ ದಶಕಂಠ ರಾವಣನ ಅವತಾರ. ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು.’ ಅನ್ನೋ ಸಾಲುಗಳು. ಕಥೆ ಬಗ್ಗೆ ಬಹಳ ಕುತೂಹಲ ಕೆರಳಿಸುವಂತಿದೆ.

ಪೋಸ್ಟರ್​ ನೋಡ್ತಿದ್ರೆ, ಇದೊಂದು ಮಾಸ್ ಮಾಸಾಲಾ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ದರ್ಶನ್​ ಪುಟಾಣಿ ಮಗುವಿನ ಕೈ ಹಿಡಿದುಕೊಂಡಿರೋದು ಬಾಲಿವುಡ್ ಸೂಪರ್ ಹಿಟ್ ಭಜರಂಗಿ ಭಾಯಿಜಾನ್ ಕಥೆಯನ್ನ ಒಮ್ಮೆ ಕಣ್ತುಂದೆ ತರ್ತಿದೆ. ದರ್ಶನ್​ ಮತ್ತು ಸಲ್ಮಾನ್​ನಡುವೆ ಸಾಕಷ್ಟು ಸಾಮ್ಯತೆಗಳಿರೋದ್ರಿಂದ ಇದು ಕನ್ನಡದ ಭಜರಂಗಿ ಭಾಯಿಜಾನ್ ಕಥೆ ಅನ್ನೋಕೆ ಅಡ್ಡಿಯಿಲ್ಲ.

ಆ ಸಿನಿಮಾದಲ್ಲೂ ಮುನ್ನಿಗಾಗಿ ಭಜರಂಗಿ ಭಾಯಿಜಾನ್ ಸಲ್ಮಾನ್ ಖಾನ್, ಏನೆಲ್ಲಾ ಸಾಹಸ ಮಾಡ್ತಾರೆ ಅನ್ನೋದು ಗೊತ್ತೇಯಿದೆ. ಇದೀಗ ದರ್ಶನ್​ D53 ಸಿನಿಮಾದಲ್ಲೂ ಅಂತದ್ದೇ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅದಕ್ಕೆ ಈ ಡೈಲಾಗ್ ಪುಷ್ಠಿ ಕೊಡುವಂತಿದೆ.

ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಬಹುಕೋಟಿ ವೆಚ್ಚದ ಸಿನಿಮಾ ಪೋಸ್ಟರ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಫೇಸ್ಬುಕ್​, ಟ್ವಿಟ್ಟರ್, ಇನ್​ಸ್ಟ್ರಾಗ್ರಾಂ ಎಲ್ಲೆಲ್ಲೂ ಪೋಸ್ಟರ್​​​ ರಾರಾಜಿಸ್ತಿದೆ. ಈಗಾಗಲೇ ದರ್ಶನ್ ಅಭಿಮಾನಿಗಳ ಮೊಬೈಲ್ ವಾಲ್​ಪೇಪರ್, ಬೈಕ್ ನಂಬರ್​ ಪ್ಲೇಟ್​ ಮೇಲೆಲ್ಲಾ D53 ಥೀಮ್​ ಪೋಸ್ಟರ್ ಕಾಣಿಸಿಕೊಂಡಿದೆ.

ಅಭಿಮಾನಿಗಳು D53 ಥೀಮ್ ಪೋಸ್ಟರ್ ಮಾದರಿಯಲ್ಲೇ ಮಗುವಿನ ಕೈ ಹಿಡಿದಿರೋ ಪೋಸ್ಟರ್ಸ್​​​ ಡಿಸೈನ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇನ್ನೂ ಚಿತ್ರಕ್ಕೆ ರಾಬರ್ಟ್​ ಅನ್ನೋ ಟೈಟಲ್​ ಫೈನಲ್​ ಮಾಡೋ ಲೆಕ್ಕಾಚಾರದಲ್ಲಿ ಚಿತ್ರತಂಡವಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಸೆಟ್ಟೇರಲಿದೆ.
ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *